Karnataka NewsLatest

*ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಎರಡು ಜಿಲ್ಲೆಯಲ್ಲಿ ದಾಳಿ ನಡೆಸಿ ಭ್ರಷ್ಟರಿಗೆ ಶಾಕ್ ನೀಡಿ, ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ದಾವಣಗೆರೆಯಲ್ಲಿ ಹಲವು ಸರ್ಕಾರಿ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳು ಶಾಕ್ ನೀಡಿದ್ದು, ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ ಬಿ. ರವಿ ಎಂಬುವವರ ಕಚೇರಿ ಹಾಗೂ ತಾಯಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಕೋಲಾರ ಜಿಲ್ಲೆಯ ಹಲವೆಡೆ ಲೋಕಾ ಎಸ್ಪಿ ಧನಂಜಯ ನೇತೃತ್ವದಲ್ಲಿ ಕೋಲಾರ ಸರ್ವೇ ಸೂಪರ್ವೈಸರ್ ಸುರೇಶ್ ಬಾಬು ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಲೋಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮವಾಗಿ ಸರ್ಕಾರಿ ದಾಖಲೆ ತಿದ್ದಿ ಸರ್ಕಾರಿ ಭೂಮಿ ಕಬಳಿಕೆ, ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಆರೋಪಕ್ಕೆ ಸಂಬಂಧಪಟ್ಟಂತೆ ಲೋಕ ಅಧಿಕಾರಿಗಳು ಸುರೇಶ್ ಬಾಬು ಅವರ ಮನೆಯ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Home add -Advt

ಕೋಲಾರ ಮನೆ, ಮಾಲೂರು ಪಟ್ಟಣ ಮನೆ, ನಿಡಘಟ್ಟ ಗ್ರಾಮದ ಮನೆ, ಕಚೇರಿ ಸೇರಿ ಒಟ್ಟು ಆರು ಕಡೆ ಲೋಕ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Related Articles

Back to top button