ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ ಇದೀಗ ಅಡುಗೆ ಅನಿಲ ದರದಲ್ಲೂ ಏರಿಕೆಯಾಗುತ್ತಿದೆ. ಇದೀಗ ಸಿಲಿಂಡರ್ ದರದಲ್ಲಿ ಮತ್ತೆ 25 ರೂಪಾಯಿ ಏರಿಕೆಯಾಗಿದೆ.
14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಗ್ಯಾಸ್ ಸಿಲಿಂಡರ್ 25 ರೂ ಏರಿಕೆಯಾಗಿದ್ದು, ಇದೀಗ ದೆಹಲಿಯಲ್ಲಿ ದೇಶೀಯ ಅನಿಲ ದರವು 794ರಿಂದ 819 ರೂಪಾಯಿಗೆ ಏರಿಕೆಯಾಗಿದೆ.
ಮುಂಬೈನಲ್ಲಿ 819 ರೂ, ಕೋಲ್ಕತ್ತಾದಲ್ಲಿ 845.50 ರೂ ಹಾಗೂ ಚೆನ್ನೈನಲ್ಲಿ 835 ರೂಪಾಯಿ ಹೆಚ್ಚಳವಾಗಿದೆ. ಕಳೆದ ಒಂದೇ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ದರ 125 ರೂ ಏರಿಕೆಯಾಗಿದೆ.
ಅಡುಗೆ ಅನಿಲ ದರದಲ್ಲಿ ಮತ್ತೆ ಏರಿಕೆ; ಕಂಗಾಲಾದ ಗ್ರಾಹಕರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ