Karnataka NewsLatestPolitics

*ಪ್ರತಾಪ್ ಸಿಂಹ ಮೊಬೈಲ್ ತನಿಖೆ ನಡೆಸಿದರೆ ಪ್ರಜ್ವಲ್ ರೇವಣ್ಣನಂತೆ ಇವರೂ ಜೈಲು ಸೇರುತ್ತಾರೆ: ಹೊಸ ಬಾಂಬ್ ಸಿಡಿಸಿದ ಎಂ. ಲಕ್ಷ್ಮಣ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೊಬೈಲ್ ನ್ನು ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸಿದರೆ ಪ್ರಜ್ವಲ್ ರೇವಣ್ಣನಂತೆ ಪ್ರತಾಪ್ ಸಿಂಹ ಕೂಡ ಜೈಲಿಗೆ ಹೋಗುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ಮೊಬೈಲ್ ನಲ್ಲಿಯೂ ಪ್ರಜ್ವಲ್ ರೇವಣ್ಣ ರೀತಿಯಲ್ಲಿಯೇ ಅಶ್ಲೀಲ ಫೋಟೋ, ವಿಡಿಯೋಗಳಿವೆ. 2023ರರಲ್ಲಿ ಸಂಸತ್ ಭದ್ರತಾ ಉಲ್ಲಂಘನೆ ಬಳಿಕ ಪೊಲೀಸರು ಪ್ರತಾಪ್ ಸಿಂಹ ಮೊಬೈಲ್ ವಶಪಡಿಸಿಕೊಂಡಿದ್ದರು. ಈ ವೇಳೆ ಪ್ರತಾಪ್ ಸಿಂಹ ಮೊಬೈಲ್ ನಲ್ಲಿ ನಗ್ನ ಚಿತ್ರಗಳು, ವಿಡಿಯೋಗಳು ಸಿಕ್ಕಿವೆ. ಇದನ್ನು ನೋಡಿದ ಅಮಿತ್ ಶಾ ಅವರೇ ದುಗ್ಭ್ರಮೆಯಾಗಿದ್ದರು. ಈ ಬಗ್ಗೆ ನನ್ನ ಬಳಿ ಆಧಾರಗಳಿವೆ ಎಂದಿದ್ದಾರೆ.

ಅಂತಹ ವಿಡಿಯೋ ಇರುವುದಕ್ಕೆ ಗೃಹ ಸಚಿವರು ಪ್ರತಾಪ್ ಸಿಂಹ ಮೊಬೈಲ್ ಸೀಜ್ ಮಾಡಿಸಿದ್ದರು. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಪ್ರತಾಪ್ ಸಿಂಹಗೆ ಲೋಕಸಭಾ ಟಿಕೆಟ್ ನೀಡಬಾರದೆಂಬ ನಿರ್ಧಾರಕ್ಕೆ ಬಂದರು ಎಂದರು.

ಇಂತಹ ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬೈಯ್ಯುವುದೇ ಕೆಲಸ ಎಂದು ಕಿಡಿಕಾರಿದರು.

Home add -Advt

Related Articles

Back to top button