Latest

ಮಹದೇವ್ ಸಾಹುಕಾರ್ ಮೇಲೆ ಗುಂಡಿನ ದಾಳಿ ಪ್ರಕರಣ; ಇನ್ನಷ್ಟು ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಭೀಮಾತೀರದ ಮಹಾದೇವ್ ಸಾಹುಕಾರ್ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಯಾಸಿನ್ ದಂದರಗಿ, ಕರೆಪ್ಪ ಸೊನ್ನದ, ಸಿದ್ದು ಬೊಮ್ಮನಜೋಗಿ, ಸಂಜು ಮಾನವರ್, ರವಿ ಬಂಡಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಮ್ಡುಗಳು, 4 ಮೊಬೈಲ್, 1 ಆಟೋ ರಿಕ್ಷಾ ಹಾಗೂ ಮಚ್ಚು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ನ.5ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

ಮಹದೇವ್ ಸಾಹುಕಾರ್ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿದ್ದ ಆರೋಪಿಗಳು ಸಾಹುಕಾರ್ ಮೆಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.

Related Articles

Back to top button