*ಮಹಾರಾಷ್ಟ್ರ, ಇಂದೋರ್ ನಿಂದ ಗಾಂಜಾ ತಂದು ಮಾರಾಟ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ಹಾಗೂ ಇಂದೋರ್ ನಿಂದ ಗಾಂಜಾ ತಂದು ಬೆಳಗಾವಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಮಾನಸ ಮನೋಹರ ಕದಮ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ರಿತಿಕ ಪಾಟೀಲ ಎಂಬಾತ ಪರಾರಿಯಾಗಿದ್ದಾನೆ.
ಆರೋಪಿಗಳು ಮಹಾರಾಷ್ಟ್ರ-ಇಂದೋರ್ ರ್ಡರ್ ನಿಂದ ಸುನೀಲ ಕಲಗಾಟ ಎಂಬಾತನಿಂದ ಗಾಂಜಾ ತಂದು ಬೆಳಗಾವಿ ಗ್ರಾಮೀಣ ಪ್ರದೇಶದ ಜೈತುನ ಮಾಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವಾಗ ಸಿಸಿಬಿ ಪೊಲೀಸರು ಆರೋಪಿತನ್ನು ಬಂಧಿಸಿದ್ದಾರೆ.
ಬಂಧಿತನಿಂದ 55,000 ರೂ. ಮೌಲ್ಯದ 1 ಕೆ.ಜಿ. 100ಗ್ರಾಂ ಗಾಂಜಾ, 600 ರೂ ಮೌಲ್ಯದ ಡಿಜಿಟಲ್ ತೂಕದ ಯಂತ್ರ, 8,000 ರೂ. ಮೋಬೈಲ್, ಹೀಗೆ ಒಟ್ಟು 63,600 ರೂ ಮೌಲ್ಯದ ವಸ್ತುಗಳನ್ನು ಜಪ್ತಪಡಿಸಲಾಗಿದೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ, ಪರಾರಿಯಾದ ಆರೋಪಿ ಪತ್ತೆ ಹಾಗೂ ಪ್ರಕರಣದ ತನಿಖೆ ಮುಂದುವರೆಸಲಾಗಿದೆ.
ಮೇಲಿನ ಪ್ರಕರಣದಲ್ಲಿ ದಾಳಿ ಕೈಗೊಂಡ ಸಿಸಿಬಿ ವಿಭಾಗದ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿದ್ದಾರೆ.




