
ಪ್ರಗತಿವಾಹಿನಿ ಸುದ್ದಿ : ಮಹಾತ್ಮಾಗಾಂಧಿಜೀಯವರ ಮರಿಮೊಮ್ಮಗಳು ನೀಲಮ್ ಬೇನ್ ಪಾರಿಖ್ (93) ಮಂಗಳವಾರ ರಾತ್ರಿ ಗುಜರಾತ್ ನ ನವಸಾರಿಯಲ್ಲಿ ನಿಧನ ಹೊಂದಿದ್ದಾರೆ.
ಹರಿದಾಸ್ ಗಾಂಧಿಯವರ ಮೊಮ್ಮಗಳಾಗಿದ್ದ ನೀಲಮ್ ಬೇನ್ ಪಾರಿಖ್ ತಮ್ಮ ಜೀವನವನ್ನು ಗಾಂಧಿ ತತ್ವಗಳಿಗೆ ಅರ್ಪಿಸಿಕೊಂಡು, ಮಹಿಳಾಭಿವೃದ್ಧಿ ಹಾಗೂ ಸಮಾಜಸೇವೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.
ತಮ್ಮ ಪುತ್ರ ಡಾ. ಸಮೀರ್ ಪಾರೀಖ್ ನೊಂದಿಗೆ ವಾಸಿಸುತ್ತಿದ್ದ ಅವರ ಅಂತ್ಯಕ್ರಿಯೆ ಇಂದು ಹುಟ್ಟೂರಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.