ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 8 ಜನರಿಗೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಚೆಕ್ ಗಳನ್ನು ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿತರಿಸಿದರು.
ಮಂಗಳವಾರ ಬೆಳಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಚೆಕ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಕ್ಷೇತ್ರದಲ್ಲಿ ಯಾರೇ ಸಂಕಷ್ದಲ್ಲಿದ್ದರೂ ಅವರಿಗೆ ನೆರವು ನೀಡುತ್ತ ಬಂದಿದ್ದೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೂರಾರು ಜನರಿಗೆ ಸೌಲಭ್ಯ ಒದಗಿಸಿದ್ದೇನೆ. ಕೆಲವರಿಗೆ ಕೇವಲ 3 ಗಂಟೆಯಲ್ಲಿ ಹಣ ಮಂಜೂರು ಮಾಡಿಸಿದ್ದೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಾಧ್ಯವಾಗದಿದ್ದಲ್ಲಿ ವಯಕ್ತಿಕವಾಗಿಯೂ ನೆರವು ನೀಡಿದ್ದೇನೆ. ಇದರಲ್ಲಿ ಯಾವುದೇ ಜಾತಿ, ಪಕ್ಷ ಯಾವುದನ್ನೂ ನೋಡುವುದಿಲ್ಲ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.
ಇಡೀ ಕ್ಷೇತ್ರ ನನಗೆ ಕುಟುಂಬ ಇದ್ದ ಹಾಗೆ. ಎಲ್ಲರ ಮನೆಮಗಳಾಗಿ ನಾನು ಕೆಲಸ ಮಾಡುತ್ತ ಬಂದಿದ್ದೇನೆ. ಕ್ಷೇತ್ರದ ಜನರು ನನ್ನ ಮೇಲಿಟ್ಟ ವಿಶ್ವಾಸ, ಅವರು ನೀಡಿದ ಸಹಾಯ, ಸಹಕಾರವನ್ನು ನಾನೆಂದೂ ತೀರಿಸಲು ಸಾಧ್ಯವಿಲ್ಲ. ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ನಾನು ಎಲ್ಲರಿಗೂ ಚಿರಋುಣಿಯಾಗಿರುತ್ತೇನೆ ಎಂದು ಅವರು ಭಾವುಕರಾಗಿ ನುಡಿದರು.
ಗೌರವ್ವ ಯ ಬಂಬರಗಿ ಸಾ. ಯದ್ದಲಭಾವಿಹಟ್ಟಿ, ಮಂಗಲಾ ದು ಅಂಡೋಚೆ ಸಾ. ಸೋನೊಲಿ, ವಿರುಪಾಕ್ಷಿ ಕ ಹೊಸಮನಿ ಸಾ. ಸುಳೇಭಾವಿ, ನೀಲಕಂಠ ಬಾ ಪತ್ತಾರ ಸಾ. ಕಂಗ್ರಾಳಿ ಕೆ ಎಚ್. , ಸಂತೋಷ ಬಾ ತೊಲಗಿ ಸಾ. ಮುತಗಾ, ಶಿವಾಜಿ ಬಾ ಲಖನಗೌಡ ಸಾ. ಸುಳೇಭಾವಿ, ಶಾಂತಾ ಸು ಲಕಮನ್ನವರ ಸಾ. ಕಮಕಾರಟ್ಟಿ, ಅಶೋಕ ಶಿ ಕಾಂಬಳೆ ಸಾ. ಕ್ರಾಂತಿನಗರ ಗಣೇಶಪುರ -ಇವರಿಗೆ ಪರಿಹಾರದ ಚೆಕ್ ನೀಡಲಾಯಿತು.
ಚೆಕ್ ಗಳನ್ನು ವಿತರಿಸುವ ಸಂದರ್ಭದಲ್ಲಿ ಯುವರಾಜ ಕದಂ, ಬಾಪುಗೌಡ ಪಾಟೀಲ, ಚನ್ನರಾಜ ಹಟ್ಟಿಹೋಳಿ, ಮೃಣಾಲ ಹೆಬ್ಬಾಳಕರ್ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಆರೋಗ್ಯದ ಕಡೆಗೆ ಎಲ್ಲರೂ ಗಮನ ನೀಡಬೇಕು. ಆರೋಗ್ಯವಿದ್ದರೆ ಎಲ್ಲವೂ ಇದ್ದಂತೆ. ಹಾಗಾಗಿ ಬಹಳ ಕಾಳಜಿಯಿಂದ ಆರೋಗ್ಯ ಕಾಪಾಡಿಕೊಳ್ಳಿ-ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ