Latest

ರಮೇಶ ಜಾರಕಿಹೊಳಿಗೆ ನ್ಯಾಯ ಕೊಡುವುದರಲ್ಲಿ ದುರುದ್ದೇಶದಿಂದ ವಿಳಂಬ – ಯೋಗೀಶ್ವರ ಗಂಭೀರ ಆರೋಪ (ವಿಡೀಯೋ ಸಹಿತ ಸುದ್ದಿ)

ನಮ್ಮ ಸರಕಾರ ಬಂದರೂ ವಿರೋಧ ಪಕ್ಷದವರ ಕೈಯೇ ಮೇಲಾಗುತ್ತಿದೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಮೇಶ ಜಾರಕಿಹೊಳಿಗೆ ನ್ಯಾಯ ಕೊಡುವುದರಲ್ಲಿ ದುರುದ್ದೇಶದಿಂದ ವಿಳಂಬ ಮಾಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ತಮ್ಮದೇ ಪಕ್ಷದ ಮುಖಂಡರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

Home add -Advt

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಷಢ್ಯಂತ್ರಕ್ಕೆ ಬಲಿಯಾಗಿದ್ದಾರೆ ಎನ್ನುವುದು ನನಗೆ ಗೊತ್ತಾಗಿದೆ. ಅವರಿಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ಅವರಿಗೆ ನ್ಯಾಯ ಕೊಡುವುದರಲ್ಲಿ ದುರುದ್ದೇಶದಿಂದ ವಿಳಂಬ ಮಾಡಲಾಗುತ್ತಿದೆ ಎನ್ನುವುದೂ ನನಗೆ ಗೊತ್ತಿದೆ. ಅದು ಅವರ ನೋವು ಕೂಡ. ಅವರು ಒಂದು ರೀತಿಯಿಂದ ಚಡಪಡಿಸುತ್ತಿದ್ದಾರೆ. ಅವರು ಷಡ್ಯಂತ್ರಕ್ಕೆ ಒಳಗಾಗಿದ್ದಾರೆ ಎನ್ನುವುದು ಜಗಜ್ಜಾಹೀರಾಗಿದೆ ಎಂದು ಹೇಳಿದರು.

ನಮ್ಮ ಸರಕಾರ ಬಂದರೂ ವಿರೋಧ ಪಕ್ಷದವರ ಕೈಯೇ ಮೇಲಾಗುತ್ತಿದೆ. ನಮ್ಮ ಸರಕಾರ ಎನ್ನುವ ಭಾವನೆ ಮೂಡುತ್ತಿಲ್ಲ ಎಂದು ಮತ್ತೊಂದು ಗಂಭೀರ ಆರೋಪ ಮಾಡಿದರು.

ಸರ್ಕಾರದ ವಿರುದ್ಧ ಬಹಿರಂಗವಾಗಿ ಸಿಡಿದೆದ್ದ ಸಿ.ಪಿ.ಯೋಗೇಶ್ವರ್

Related Articles

Back to top button