*ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಂಜಾ ಗಿಡಗಳನ್ನು ಬೆಳೆದು ಅವುಗಳನ್ನು ಒಣಗಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಲಗೌಡ ರಾವಜಿಗೌಡ ಪಾಟೀಲ್ ಎಂಬಾತನ್ನು ಬಂಧಿಸಿ, ಬಂಧಿತನಿಂದ 18 ಕೆ.ಜಿ 500 ಗ್ರಾಂ ಹಸಿ ಗಾಂಜಾ ಗಿಡಗಳು ಮತ್ತು 4 ಕೆ.ಜಿ. 500ಗ್ರಾಂ ಅರ್ಧಮರ್ಧ ಒಣಗಿದ ಗಾಂಜಾ ಗಿಡಗಳನ್ನು ಜಪ್ತ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದ ತನಿಖೆ ನಡೆಸಿದ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷ ಸುನೀಲಕುಮಾರ ಎಸ್ ನಂದೇಶ್ವರ ಅವರು, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣವು ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನ್ಯಾಯಾಧೀಶರಾದ ಗಂಗಾಧರ ಕೆ. ಎನ್. ರವರು, ಆರೋಪಿ ಮಲಗೌಡ ರಾವಜಿಗೌಡ ಪಾಟೀಲ ದೋಷಿ ಎಂದು ನಿರ್ಧರಿಸಿದೆ.
ಅಪರಾಧಿಗೆ 4 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಈ ಪ್ರಕರಣದ ವಿಚಾರಣೆಗೆ ಕಾಲಕ್ಕೆ ನ್ಯಾಯಾಲಯದಲ್ಲಿ ಸಾರ್ವಜನಿಕ ಅಭಿಯೋಜಕರಾದ ಭಾರತಿ ಹೊಸಮನಿ ಇವರು ವಾದ ಮಂಡಿಸಿದ್ದರು.

