Kannada NewsKarnataka NewsLatest

*ಮಾಜಿ ಆರೋಗ್ಯ ಸಚಿವರ ಹೆಸರು ಹೇಳಿ ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ ವಿದ್ಯಾರ್ಥಿಗಳಿಗೆ ವಂಚನೆ; FIR ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತನಗೆ ಪರಿಚಯ, ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಾನು ಸೆಂಟ್ರಲ್ ಗೌರ್ನಮೆಂಟ್ ನೌಕರ. ನನಗೆ ಮಿನಿಸ್ಟರ್ ಗಳು, ಮೆಡಿಕಲ್ ಕಾಲೇಜಿನವರೂ ಗೊತ್ತು ಎಂದು ಪರಿಚಯಿಸಿಕೊಂಡ ವ್ಯಕ್ತಿ, ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಕೊಡಿಸುತ್ತೇನೆ ಎಂದು ವಿದ್ಯಾರ್ಥಿಗಳನ್ನು ನಂಬಿಸಿದ್ದಾನೆ.

Home add -Advt

ಈತನ ಮಾತು ನಂಬಿ ಇಬ್ಬರು ವಿದ್ಯಾರ್ಥಿಗಳು ಬರೋಬ್ಬರಿ 35 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಇದೀಗ ಹಣ ಪಡೆದ ವಂಚಕ ಪರಾರಿಯಾಗಿದ್ದಾನೆ. ಮೆಡಿಕಲ್ ಸೀಟ್ ಸಿಗುವ ಭರವಸೆಯಲ್ಲಿ ಹಣ ಕಳೆದುಕೊಂಡ ವಿದಾರ್ಥಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಿದ್ಯಾರಣ್ಯಪುರ ಠಾಣೆಯಲ್ಲಿ ವಿದ್ಯಾರ್ಥಿಗಳು ದೂರು ನೀಡಿದ್ದು, ವಂಚಕನ ವಿರುದ್ಧ ಎಫ್ ಐ ಅರ್ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


Related Articles

Back to top button