Latest

ಗೋಡೆಯ ಮೇಲೆ ಉಗ್ರ ಸಂಘಟನೆಗಳ ಪರ ಬರಹ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಬಳಿ ಅಪಾರ್ಟ್ ಮೆಂಟ್ ಕಾಂಪೌಂಡ್ ಗೋಡೆಯ ಮೇಲೆ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಬರಹಗಳನ್ನು ಬರೆದಿದ್ದಾರೆ. ಆರೋಪಿಗಳ ಪತ್ತೆಗಾಗಿ ಕದ್ರಿ ಪೊಲೀಸರಿಂದ ಶೋಧಕಾರ್ಯ ಆರಂಭವಾಗಿದೆ.

ಗೋಡೆ ಮೇಲೆ ಇಂಗ್ಲೀಷ್ ನಲ್ಲಿ ಬರೆಯಲಾಗಿದ್ದು, ಸಂಘಿಗಳು ಹಾಗೂ ಮನುವಾದಿಗಳ ವಿರುದ್ಧ ಹೋರಾಟಕ್ಕೆ ಲಶ್ಕರ್-ಇ-ತೊಯ್ಬಾ ಉಗ್ರರನ್ನು ಆಹ್ವಾನಿಸಲು ಪ್ರೇರೇಪಿಸಬೇಡಿ ಎಂದು ಬರೆಯಲಾಗಿದೆ.

Home add -Advt

ಮಧ್ಯರಾತ್ರಿ 2-4 ಗಂಟೆ ಅವಧಿಯಲ್ಲಿ ಕಿಡಿಗೇಡಿಗಳು ಗೋಡೆಗಳ ಮೇಲೆ ಬರೆದಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಭೇಟಿ ನೀಡಿರುವ ಕದ್ರಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ.

Related Articles

Back to top button