Kannada NewsLatestNational

*ಮಾವಿನ ಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಸಹೋದರಿಯರು ಸಾವು*

ಪ್ರಗತಿವಾಹಿನಿ ಸುದ್ದಿ: ಮಾವಿನ ಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ತಾಯಿ ಹಾಗೂ ಐವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೈದರಾಬಾದ್ ನ ನಾರಾಯಣಗುಡದಲ್ಲಿ ಈ ಘಟನೆ ನಡೆದಿದೆ, ಬೀದರ್ ಜಿಲ್ಲೆಯ ಔರಾದ್ ಮೂಲದ ಕುಟುಂಬ ನಾರಾಯಣಗುಡದಲ್ಲಿ ವಾಸವಾಗಿತ್ತು. ಎರಡು ದಿನಗಳ ಹಿಂದೆ ರಾತ್ರಿ ಊಟದ ಬಳಿಕ ಕುಟುಂಬದವರು ಮಾವಿನಹಣ್ಣು ಸೇವಿಸಿದ್ದರು. ಮಾವಿನಹಣ್ಣು ತಿಂದ ಕೆಲವೇ ಸಮಯದಲ್ಲಿ ಆರು ಜನರು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ. ತಾಯಿ ಹಾಗೂ ಮೂವರು ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ. ಮೃತ ಮಕ್ಕಳ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಲಾಗಿದೆ.

Related Articles

Back to top button