Latest

ಈ ಕಾರಣಕ್ಕೆ ಯುವತಿಯನ್ನು 18 ಬಾರಿ ಚಾಕುವಿನಿಂದ ಇರಿದ ಪ್ರಿಯತಮ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತನ್ನನ್ನು ಮದುವೆಯಾಗಲು ಯುವತಿ ನಿರಾಕರಿಸಿದ ಕಾರಣಕ್ಕೆ ಯುವಕ ಆಕೆಯನ್ನು 18 ಬಾರಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಹೈದರಾಬಾದ್ ನ ಹಸ್ತಿನಾಪುರಂ ನಲ್ಲಿ ನಡೆದಿದೆ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿರಿಷಾ ಹಾಗೂ ಬಸವರಾಜ್ ಇಬ್ಬರೂ ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದರು. ಆದರೆ ಕಳೆದ ಎರಡು ತಿಂಗಳಿದ್ದ ಇಬ್ಬರ ನಡುವೆ ಮನಸ್ತಾಪವುಂಟಾಗಿ ಶಿರಿಷಾ ಬಸವರಾಜ್ ನನ್ನು ಮದುವೆಯಾಗಲು ನಿರಾಕರಿಸಿದ್ದಳು.

ಇತ್ತೀಚೆಗೆ ಶ್ರೀಧರ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದಳು. ತನ್ನನ್ನು ಮದುವೆಯಾಗಲು ನಿರಾಕರಿಸಿ ಬೇರೊಬ್ಬನ ಜತೆ ಸ್ನೇಹ ಬೆಳೆಸಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡ ಬಸವರಾಜ್ ಶಿರಿಷಾಳನ್ನು ಕೊಲೆಮಾಡಲು ನಿರ್ಧರಿಸಿ 18 ಬಾರಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಶಿರಿಷಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಎಲ್ ಬಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜನವರಿ ಅಂತ್ಯಕ್ಕೆ ಸಿಎಂ ಬೊಮ್ಮಾಯಿ ಬದಲಾವಣೆ ಖಚಿತ – ತಂಗಡಗಿ

Related Articles

Back to top button