Latest

ಹಲವು ಪರೀಕ್ಷೆಗಳು ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನಾಟಕ ರಾಜ್ಯದ ವಿವಿಧ ರೈತ ಸಂಘಟನೆಗಳು ದಿನಾಂಕ 28-09-2020 ರಂದು ಕನಾಟಕ ಬಂದ್“‌ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದಿನಾಂಕ 28-09-2020 ರಂದು ನಡೆಯಬೇಕಿದ್ದ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಸೋಮವಾರ (28ರಂದು) ನಡೆಯಬೇಕಿದ್ದ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳನ್ನು ಒಂದು ದಿನ ಮುಂದೂಡಲಾಗಿದ್ದು, 29ರಂದು ನಡೆಯಲಿದೆ ಎಂದು ಪ್ರೌಢ ಶಿಕ್ಷಣ ಇಲಾಖೆಯ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲಾ ತಿಳಿಸಿದ್ದಾರೆ.

ಅದೇ ರೀತಿ, 28ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಎಲ್ಲಾ ಸ್ನಾತಕ ಪದವಿ ಪರೀಕ್ಷೆಗಳನ್ನುದಿನಾಂಕ 29-09-2020ಕ್ಕೆ ಮೂಂದೂಡಲಾಗಿದೆ. ಪರೀಕ್ಷೆ ನಡೆಯುವ ವೇಳಾಪಟ್ಟಿಯ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸದರಿ ವಿಷಯವನ್ನು ಎಲ್ಲಾ ವಿದ್ಯಾರ್ಥಿಗಳ  ಗಮನಕ್ಕೆ ತರಲು ಕುಲಸಚಿವರು (ಮೌಲ್ಯಮಾಪನ)  ಪ್ರೊ. ಎಸ್.ಎಂ .‌ ಹುರಕಡ್ಲಿ ತಿಳಿಸಿದ್ದಾರೆ.

 

Home add -Advt

Related Articles

Back to top button