National

*ಗಂಡಸರ ಮೇಲಿನ ದ್ವೇಷಕ್ಕೆ ಸಲಿಂಗ ವಿವಾಹವಾದ ಇಬ್ಬರು ಯುವತಿಯರು*

ಪ್ರಗತಿವಾಹಿನಿ ಸುದ್ದಿ: ಇಬ್ಬರು ಪುರುಷ ದ್ವೇಷಿ ಯುವತಿಯರು ಪರಸ್ಪರ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಶಿವ ದೇವಾಲಯದಲ್ಲಿ ನಡೆದಿದೆ.

Home add -Advt

ಉತ್ತರ ಪ್ರದೇಶದ ಬದೌನ್ ಕೋರ್ಟ್ ಆವರಣದ ಒಳಗಿರುವ ಶಿವ ದೇವಾಲಯದಲ್ಲಿ ಇಬ್ಬರು ಯುವತಿಯರು ಹಾರ ಬದಲಿಸಿಕೊಂಡು ವಿವಾಹವಾಗಿದ್ದಾರೆ. ನಮಗೆ ಪುರುಷರು ಬೇಡ ಎಂಬ ಕಾರಣಕ್ಕೆ ನಾವೇ ಮದುವೆಯಾಗಿದ್ದಾಗಿ ಯುವತಿಯರು ತಿಳಿಸಿದ್ದಾರೆ.

ಮುಸ್ಲಿಂ ಯುವಕರು ತಮ್ಮನ್ನು ಹಿಂದುಗಳೆಂದು ಪರಿಚಯಿಸಿಕೊಂಡು ಸ್ನೇಹಬೆಳೆಸಿ ನಮಗೆ ವಂಚಿಸಿದ್ದಾರೆ. ಇದರಿಂದ ಪುರುಷರ ಮೇಲೆ ದ್ವೇಷ ಬೆಳೆಯಿತು. ಹಾಗಾಗಿ ನಾವೇ ವಿವಹವಾಗಿದ್ದಾಗಿ ಯುವತಿಯರು ಹೇಳಿಕೆ ನೀಡಿದ್ದಾರೆ. ಆದರೆ ಈ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಲ್ಲ ಎಂದು ವಕೀಲದಿವಾಕರ್ ವರ್ಮಾ ತಿಳಿಸಿದ್ದಾರೆ.

https://pragativahini.com/vijayapura-mahanagara-palike35-memberskalaburagi-high-court

Related Articles

Back to top button