Belagavi NewsBelgaum News

*ಅಂಕಲಗಿ ಪಟ್ಟಣದಲ್ಲಿ ವಿಜಯದಶಮಿ: ಅ.10 ರಿಂದ ವಿವಿಧ ಕಾರ್ಯಕ್ರಮಗಳು*

ಪ್ರಗತಿವಾಹಿನಿ ಸುದ್ದಿ: ಗೋಕಾಕ ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಅಕ್ಟೋಬರ್ 10 ರಂದು (ಗುರುವಾರ) ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜಯದಶಮಿ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.

ಡೋಳ್ಳಿನ ವಾಲಗ, ಡೋಳ್ಳಿನ ಪದಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ರಾತ್ರಿ 8 ಗಂಟೆಗೆ ಜರುಗಲಿವೆ. ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ಹಣಬರಟ್ಟಿ ಶ್ರೀ ಮಹಾಲಕ್ಷ್ಮೀ ದೇವತೆಗಳು ಅ.11 ರಂದು (ಶುಕ್ರವಾರ) ಸಂಜೆ 5 ಗಂಟೆಗೆ ಪಲ್ಲಕಿಯೊಂದಿಗೆ ಅಗ್ನಿ ಹಾಯಲಿವೆ.

ಇದರಲ್ಲಿ ಭಾಗವಹಿಸುವ ಸಮಸ್ತ ಭಕ್ತಾಧಿಗಳು ದೇವಿ ಕೃಪೆಗೆ ಪಾತ್ರರಾಗಿ, ಅನ್ನ ಪ್ರಸಾದ ಪಡೆಯಬೇಕು ಎಂದು ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದ ಪಂಚ ಕಮಿಟಿಯ ಅಧ್ಯಕ್ಷ ಲಕ್ಕಪ್ಪ ಪೂಜಾರಿ ಅವರು ಕೋರಿದ್ದಾರೆ.

Related Articles

Back to top button