ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಶರಣರ ಉಕ್ತಿಯಂತೆ ಕಾಯಕದಲ್ಲಿ ದೇವರನ್ನು ಕಾಣುವ ಮೂಲಕ ನಾವೆಲ್ಲ ಜೀವನದ ಸಾರ್ಥಕತೆಗೆ ಮುಂದಾಗಬೇಕಿದೆ” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಶ್ರೀ ಆದಿ ಶಿವಲಿಂಗೇಶ್ವರ ಜಾತ್ರಾ ಉತ್ಸವ ಮಂಡಳಿ ಸಾರಥಿ ನಗರ (ಶಿವಲಿಂಗೇಶ್ವರ ಕಾಲೋನಿ, ಪೋಲಿಸ್ ಕಾಲೋನಿ, ಆಶ್ರಯ ಕಾಲೋನಿ, ನೀರಾವರಿ ಕಾಲೋನಿ) ವಿದ್ಯಾ ನಗರ, ಕುವೆಂಪು ನಗರ, ಸಹ್ಯಾದ್ರಿ ನಗರ ಹಾಗೂ ಇನ್ನಿತರ ಕಾಲೋನಿಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಭಕ್ತಿ ಎಂಬುದು ಆಡಂಬರಕ್ಕಿಂತ ಮನಸ್ಪೂರ್ವಕವಾಗಿರಬೇಕು. ಪರಹಿತವೇ ಭಕ್ತಿಯ ಧ್ಯೇಯವಾದಲ್ಲಿ ಅಂಥ ಮನುಷ್ಯ ದೇವರ ಪ್ರೀತಿ, ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಉಪವಾಸ, ಉಪಾಸನೆ, ಕಠಿಣ ವ್ರತಗಳು ನಮ್ಮಲ್ಲಿನ ಸಂಯಮ ಶಕ್ತಿ ವೃದ್ಧಿಸುವುದಲ್ಲದೆ ಸದೃಢ ಆರೋಗ್ಯಕ್ಕೂ ಸಹಕರಿಸುತ್ತವೆ. ಉದಾರ ಮನಸ್ಸನ್ನು ಅಂತರ್ಗತ ಮಾಡಿಕೊಂಡ ಬಲಿಷ್ಠ ಕಾಯ ಒಳ್ಳೆಯ ಕಾಯಕಗಳಿಗೆ ಪೂರಕವಾಗುತ್ತದೆ” ಎಂದು ಅವರು ಹೇಳಿದರು.
ಈ ಸಮಯದಲ್ಲಿ ರಾವಸಾಬ ಪಾಟೀಲ, ಬಸು ಕಲಾದಗಿ, ಹತ್ತಿ, ನಾಗನೂರು, ಸಂಗೀತಾ ತಂಗಡಿ, ವನಿತಾ ಗೊಂದಳಿ, ಇಮ್ತಿಯಾಜ್, ಮುಷ್ತಾಕ್, ಶಿವಲಿಂಗೇಶ್ವರ ಕಮಿಟಿಯವರು ಉಪಸ್ಥಿತರಿದ್ದರು.
ವಿಟಿಯು ಬಳಿಯ ಅರಣ್ಯ ಪ್ರದೇಶಕ್ಕೆ ಬೆಂಕಿ; ಅಪಾರ ಸಸ್ಯಗಳು ಆಹುತಿ
https://pragati.taskdun.com/forest-fire-near-vtu-there-are-many-plants-burnt/
ಮಲಪ್ರಭಾ ನದಿ ತೀರದಲ್ಲಿ ಗಂಗಾ ಆರತಿ
https://pragati.taskdun.com/ganga-aarti-on-the-banks-of-malaprabha-river/
https://pragati.taskdun.com/karnataka-forest-stafftamil-nadu-hunterfiring-casev-somannareaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ