Latest

ಅಪ್ರಾಪ್ತೆ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನು ನಂಬಿಸಿ ಕರೆದೊಯ್ದು ಸ್ನೇಹಿತರೇ ಅತ್ಯಾಚಾರವೆಸಗಿರುವ ನೀಚ ಕೃತ್ಯ ಹುಬ್ಬಳ್ಳಿಯ ಬೈಪಾಸ್ ರಿಂಗ್ ರಸ್ತೆಯಲ್ಲಿ ನಡೆದಿದೆ.

ಬಾಲಕಿಯ ಪರಿಚಿತರೇ ಆಗಿರುವ ನಾಲ್ವರು ಸ್ನೇಹಿತರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಬಾಲಕಿಗೆ ಮೊಬೈಲ್ ಫೋನ್ ಕೊಡಿಸುವುದಾಗಿ ಹೇಳಿ ಹುಬ್ಬಳ್ಳಿಗೆ ನಗರಕ್ಕೆ ಕರೆದೊಯ್ದ ಆರೋಪಿಗಳು ಬಳಿಕ ಬಲವಂತವಾಗಿ ಬೈಪಾಸ್ ರಿಂಗ್ ರಸ್ತೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ.

ದೇವರಾಜ್, ಪಕ್ಕಿರೇಶ್ ಹಾಗೂ ಇನ್ನಿಬ್ಬರು ಸೇರಿ ಕೃತ್ಯವೆಸಗಿದ್ದಾರೆ. ಗೋಕುಲ್ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button