Kannada NewsKarnataka NewsNationalPolitics

*ಭಾರತದಲ್ಲಿ ಹೂಡಿಕೆ ಮಾಡುವಂತೆ ಕೆನಡಾಕ್ಕೆ ಸಚಿವ ಪ್ರಲ್ಹಾದ ಜೋಶಿ ಮನವಿ*

ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಸಚಿವ ಪ್ರಲ್ಹಾದ ಜೋಶಿ ಅವರು ಕೆನಡಾಕ್ಕೆ ಆಹ್ವಾನ ನೀಡಿದ್ದಾರೆ.

ನವದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಕೆನಡಾ ಮೂಲದ CDPQ Global ಮುಖ್ಯಸ್ಥರೊಂದಿಗೆ ಈ ಬಗ್ಗೆ ಚರ್ಚಿಸಿದರು. ವಿಶ್ವದ ಅತಿದೊಡ್ಡ ಮತ್ತು ವೈವಿಧ್ಯಮಯ ಸಾಂಸ್ಥಿಕ ಹೂಡಿಕೆದಾರರಲ್ಲಿ ಒಂದಾದ Caisse de dépôt et placement du Québec (CDPQ) Global ಮುಖ್ಯಸ್ಥ ಮಾರ್ಕ್-ಆಂಡ್ರೆ ಬ್ಲಾಂಚಾರ್ಡ್ ಅವರೊಂದಿಗೆ ಸಚಿವ ಪ್ರಲ್ಹಾದ ಜೋಶಿ ಮಹತ್ವದ ಚರ್ಚೆ ನಡೆಸಿದರು.

Home add -Advt

ಇದೇ ವೇಳೆ ಸಚಿವರು,  ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಅದ್ಭುತ ಪ್ರಗತಿಯ ಬಗ್ಗೆ ಕೆನಡಾದ ಗ್ಲೋಬಲ್ ಕಂಪನಿ ಮುಖ್ಯಸ್ಥರೊಂದಿಗೆ ಅಗತ್ಯ ಮಾಹಿತಿ ಹಂಚಿಕೊಂಡರು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ  ಸಚಿವ ಪ್ರಲ್ಹಾದ ಜೋಶಿ, RE-INVEST 2024 ನಲ್ಲಿ ಭಾಗವಹಿಸುವಂತೆಯೂ ಅವರಿಗೆ ಆಹ್ವಾನ ನೀಡಿದರು.

Related Articles

Back to top button