Latest

ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್

ಪ್ರಗತಿವಾಹಿನಿ ಸುದ್ದಿ; ಗುವ್ಹಾಟಿ: ಅಸ್ಸಾಂನ ಗುವಾತಿಯಲ್ಲಿ 15 ವರ್ಷದ ಬಾಲಕಿಯೊಬ್ಬಳ ಮೇಲೆ ಐವರು ದುರುಳರು ಹೊಟೇಲ್ ಕೋಣೆಯೊಂದರಲ್ಲಿ ಅತ್ಯಾಚಾರ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕಿಯ ಪಕ್ಕದ ಮನೆಯ ವ್ಯಕ್ತಿಯೊಬ್ಬ ಫೆ. 16ರಂದು ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ. ಬಳಿಕ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ.

ವಿಡಿಯೋವನ್ನು ಡಿಲೀಟ್ ಮಾಡುವುದಾದರೆ ಹೊಟೇಲ್ ಕೋಣೆಗೆ ಬಾ ಎಂದು ಬಾಲಕಿಗೆ ಕರೆದಿದ್ದ. ಅದನ್ನು ನಂಬಿ ಹೊಟೇಲ್ ಒಂದ ಕೋಣೆಗೆ ಹೋದಾಗ ಮತ್ತೆ ಐವರು ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿಯ ತಾಯಿ ಮಾ.11ರಂದು ಗುವ್ಹಾಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಗುವ್ಹಾತಿ ಮಹಿಳಾ ಪೊಲೀಸ್ ವಿಭಾಗದ ಎಸಿಪಿ ಬನಿತಾ ನಾಥ್ ತಿಳಿಸಿದ್ದಾರೆ.

ಸೇತುವೆಗೆ ಗುದ್ದಿದ ಕಾರು; 6 ತಿಂಗಳ ಮಗು ಸೇರಿ ಐವರ ದುರ್ಮರಣ

ಪಂಜಾಬ್ ಚುನಾವಣೆಯ ಗೆಲುವಿನ ಹಿನ್ನೆಲೆ: ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರಾ ರಾಜ್ಯದ ಪ್ರಮುಖ ರಾಜಕೀಯ ಮುಖಂಡರು ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button