Belagavi NewsBelgaum News

*ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿದ ಶಾಸಕ ಆಸೀಫ್ ಸೇಠ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ಸೋಮವಾರ (ಮೇ.26) ಶಾಸಕರ ಗೃಹ ಕಚೇರಿಯಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿರುವ 5 ವಿಕಲಚೇತನ ಫಲಾನುಭವಿಗಳಿಗೆ ಆಶೀಫ್ (ರಾಜು) ಸೇಠ ಅವರು ದ್ವಿಚಕ್ರ ವಾಹನ ವಿತರಿಸಿದರು.

ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ, ಯುವ ಮುಖಂಡರಾದ ಅಮನ್ ಸೇಠ, ಸಿಡಿಪಿಓ ರಾಮಮೂರ್ತಿ, ಸಿಬ್ಬಂದಿ ಕಿರಣ್ ಇಳಿಗೇರ ಸೇರಿದಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮತ್ತಿತರ ಸಿಬ್ಬಂದಿಗಳು ಹಾಜರಿದ್ದರು‌.

Related Articles

Back to top button