Kannada NewsKarnataka NewsLatest

ಜಿಲ್ಲಾ ಆಸ್ಪತ್ರೆಯ ನರಕದೃಷ್ಯ ಕಂಡು ಶಾಸಕ ಅನಿಲ ಬೆನಕೆ ಕೆಂಡಾಮಂಡಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  –  ಕಳೆದ ೨ ದಿನಗಳಿಂದ ಸಂಘ ಸಂಸ್ಥೆಗಳು ನಡೆಸಿದ ಪ್ರತಿಭಟನೆ ನಂತರ ಇಂದು ಜಿಲ್ಲಾ ಆಸ್ಪತ್ರೆಗೆ ಬೇಟಿ ನೀಡಿ ಹೆರಿಗೆ ವಾರ್ಡಗೆ ತೆರಳಿದ ಶಾಸಕರಿಗೆ ನರಕ ಸದೃಶ ವಾತಾವರಣ ಎದುರಾಯಿತು.

ಹೆರಿಗೆ ವಾರ್ಡ ತುಂಬ ಎಲ್ಲೆಂದರಲ್ಲಿ ಕೆಸರು, ಕುಡಿಯುವ ನೀರು ಇಲ್ಲದಿರುವುದು, ತೊಟ್ಟಿಗಳಲ್ಲಿ ಬಾರದ ನೀರು, ನೀರು ಮತ್ತು ಲೈಟ್ ಇಲ್ಲದ ಅನಾಗರಿಕ ಶೌಚಾಲಯಗಳು, ಹೆರಿಗೆಯಾದ ಮಹಿಳೆಯರ ಸ್ನಾನಕ್ಕೆ ಸಿಗದ ಬಿಸಿನೀರು, ವಾರ್ಡಗಳಲ್ಲಿನ ಅಸ್ವಚ್ಚತೆಯಿಂದ ಕೂಡಿದ ಗಬ್ಬು ವಾಸನೆ, ಔಷಧಿಗಳ ಅಲಭ್ಯತೆ, ಶುಧ್ದ ಕುಡಿಯುವ ನೀರಿನ ಘಟಕ ಬಂದಾಗಿರುವುದು, ರೋಗಿಗಳಿಗೆ ಕೂಡ್ರಲು ಆಸನದ ವ್ಯವಸ್ಥೆ ಇಲ್ಲದಿರುವುದು, ದಾದಿಗಳ ದರ್ಪದ ವರ್ತನೆ, ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯನಿರ್ವಹಣೆಗಳು ಮತ್ತು ರೋಗಿಗಳ ಜೊತೆಗೆ ಇರುವ ಅವರ ನಡವಳಿಕೆಗಳು, ಸರಿಯಾದ ಸಮಯಕ್ಕೆ ವೈದ್ಯರು ಇಲ್ಲದಿರುವುದು ಹೀಗೆ ಹಲವಾರು ಸಮಸ್ಯೆಗಳನ್ನು ಕಂಡ ಶಾಸಕ ಅನಿಲ ಬೆನಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.


ಜಿಲ್ಲಾ ಆಸ್ಪತ್ರೆಗೆ ಕೇಂದ್ರ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಹಣದ ಕೊರತೆ ಇಲ್ಲವೇ ಇಲ್ಲ.  ಭಿಮ್ಸ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ಇಲ್ಲದ ಇಚ್ಚಾಶಕ್ತಿಯಿಂದ ಆಸ್ಪತ್ರೆ ದುಸ್ಥಿತಿ ಕಂಡಿದೆ ಎಂದು ಶಾಸಕ ಅನಿಲ ಬೆನಕೆ ಮಾಧ್ಯಮಗಳಿಗೆ ತಿಳಿಸಿದರು.

ನಾಳೆಯೊಳಗೆ ಸರಿಯಾಗದಿದ್ದರೆ ಅಧಿಕಾರಿಗಳ ಅಮಾನತಿಗೆ ಶಿಪಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು. ನಂತರದಲ್ಲಿ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಅವರನ್ನು ಸಂಪರ್ಕಿಸಿ ಜಿಲ್ಲಾ ಆಸ್ಪತ್ರೆಯ ದುಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಹಲವು ಸೂಚನೆಗಳ ನಂತರವೂ ಜಿಲ್ಲಾ ಆಸ್ಪತ್ರೆ ವ್ಯವಸ್ಥೆ ಸುಧಾರಿಸದ್ದನ್ನು ಮನಗಂಡ ಶಾಸಕ ಅನಿಲ ಬೆನಕೆ ಹೋರಾಟಗಾರರು, ಸಮಾಜ ಸೇವಕರು, ಜವಾಬ್ದಾರಯುತ ಎನ್.ಜಿ.ಓ.ಗಳು, ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳನ್ನೊಳಗೊಂಡ ಮೇಲ್ವಚಾರಣಾ ಸಮೀತಿಯನ್ನು ರಚಿಸುವ ನಿರ್ಧಾರ ಪ್ರಕಟಿಸಿದರು.

ಸರ್ಕಾರದಿಂದ ಬರುತ್ತಿರುವ ಅನುದಾನ ಅಧಿಕಾರಿಗಳ ಅಸಡ್ಡೆಯಿಂದ ಬಳಕೆಯಾಗದೇ ಹಣ ಎಲ್ಲಿ ಹೋಗುತ್ತಿದೆ ಎಂದು ಸ್ವತಃ ಶಾಸಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಕೇಳಲಾದ ಯಾವ ಪ್ರಶ್ನೆಗೂ ವೈದ್ಯಾಧಿಕಾರಿಗಳು ಹಾಗೂ ಮುಖ್ಯ ಶೂಶ್ರೂಕ ಅಧೀಕ್ಷಕರು ಸಮಂಜಸ ಉತ್ತರ ನೀಡದೆ ಜಾರಿಕೊಳ್ಳಲು ಯತ್ನಿಸಿದರಿಂದ ಶಾಸಕರ ಕೋಪ ತಾಪ ನೆತ್ತಿಗೇರಿತು.

ನಂತರದಲ್ಲಿ ಶಾಸಕರ ಜೊತೆಗೆ ಮಾತನಾಡಿದ ರೋಗಿಗಳು ಅಲ್ಲಿನ ಸಮಸ್ಯೆಗಳ ಸುರಿಮಳೆಗೈದರು. ಭಾನುವಾರ ಮತ್ತೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹಾಗೂ ಸ್ಥಳದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಪರಿಸರವಾದಿ ಶಿವಾಜಿ ಕಾಗಣಿಕರ, ನ್ಯಾಯವಾದಿ ಎನ್. ಆರ್. ಲಾತೂರ, ಹೋರಾಟಗಾರ ಕಿರಣಕುಮಾರ ಇತರರು ಉಪಸ್ಥಿತರಿದ್ದರು.

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.

ಆಸ್ಪತ್ರೆಯ ಆರೋಗ್ಯ ಸುಧಾರಣೆಗೆ ಎಚ್ಚರಿಕೆ ನೀಡಿದ ಶಂಕರಗೌಡ ಪಾಟೀಲ

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ ಡಿಸ್ಟ್ರಿಕ್ಟ್ ಸರ್ಜನ್ ಹುಸೇನ್ ಸಾಬ್ ಖಾಜಿ ಸಸ್ಪೆಂಡ್ ಮಾಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button