Latest
ಶಾಸಕರ ಹೆಸರಲ್ಲಿ ಮಹಿಳೆಯಿಂದ ವಂಚನೆ

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಬಿಜೆಪಿ ಶಾಸಕ ರಾಜುಗೌಡ ಹೆಸರು ಹೇಳಿಕೊಂಡು ಮಹಿಳೆಯೊಬ್ಬಳು ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ವಾಸವಿದ್ದ ಸಕಲೇಶಪುರ ಮೂಲದ ರೇಖಾ ಎಂಬ ಮಹಿಳೆ ಶಾಸಕರ ಹೆಸರಲ್ಲಿ ವಂಚಿಸುತ್ತಿದ್ದಳು. ಇದೀಗಸುರಪುರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ರೇಖಾಗೆ ಸುರಪುರ ಮೂಲದ ಈಶ್ವರಗೌಡ ಎಂಬಾತ ಮಧ್ಯವರ್ತಿಯಾಗಿದ್ದ. ಈತನಿಂದಲೇ ಶಾಸಕರ ಹೆಸರು ಹೇಳಿ ರೇಖಾ ಹಣ ದೋಚುತ್ತಿದ್ದಳು. ಬೆಂಗಳೂರಿನಲ್ಲಿ ರೇಖಾಳನ್ನು ಬಂಧಿಸಿರುವ ಪೊಲೀಸರು ಸುರಪುರಕ್ಕೆ ಕರೆದೊಯ್ದಿದ್ದಾರೆ.
ನಾಳೆ SSLC ಫಲಿತಾಂಶ: ಸಮಯ ತಿಳಿಸಿದ ಸಚಿವ ನಾಗೇಶ್




