Latest

ಬೆಳಗಾವಿ, ಬೆಂಗಳೂರಿಗೆ ಮಾತ್ರ ಸಚಿವ ಸ್ಥಾನ; ರೇಣುಕಾಚಾರ್ಯ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮುಂದಿನ ವಾರ ಅಸಮಾಧಾನಿತ ಶಾಸಕರ ಸಭೆ ನಡೆಸುತ್ತೇವೆ. ಈಗಾಗಲೇ ನನಗೆ ಅತೃಪ್ತ ಶಾಸಕರು ಕರೆ ಮಾಡಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಬೆನ್ನಲ್ಲೇ ದೆಹಲಿಗೆ ತರಳಿರುವ ರೇಣುಕಾಚಾರ್ಯ, ಮುಂದಿನ ವಾರ ಅಸಮಾಧಾನಿತ ಶಾಸಕರೆಲ್ಲ ಸೇರಿ ಸಭೆ ನಡೆಸುತ್ತೇವೆ ಎಂದಿದ್ದಾರೆ.

Home add -Advt

ಸಂಪುಟ ವಿಸ್ತರಣೆ ವೇಳೆ 12 ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದೇ ಕಡೆಗಣಿಸಿದ್ದಾರೆ. ಕೇವಲ ಬೆಂಗಳೂರು, ಬೆಳಗಾವಿ ಜಿಲ್ಲೆಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ನನಗೆ ಸಚಿವ ಸ್ಥಾನ ಕೊಡಿ ಎಂದು ನಾನು ಯಾವತ್ತೂ ಬೇಡಿಕೆ ಇಟ್ಟಿಲ್ಲ. ಆದರೆ ನಮ್ಮ ಜಿಲ್ಲೆಗೆ ಒಂದು ಖಾತೆ ಕೊಡಿ ಎಂದು ಕೇಳಿದ್ದೆ. ಅದನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

Back to top button