Latest

ಜಮೀರ್ ಅಹ್ಮದ್ ವಿರುದ್ಧ ಬಿಜೆಪಿ ಶಾಸಕ ರಾಮದಾಸ್ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸಿಎಂ ಮನೆ ಮುಂದೆ ವಾಚ್ ಮ್ಯಾನ್ ಆಗುತ್ತೇನೆ ಎಂದು ಆಗಿಲ್ಲ. ಈಗ ಸರ್ಕಾರಕ್ಕೆ ಆಸ್ತಿ ಬರ್ದು ಕೊಡ್ತಾರಾ ಎಂದು ಶಾಸಕ ರಾಮದಾಸ್ ವ್ಯಂಗ್ಯವಾಡಿದ್ದಾರೆ.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ಶಾಸಕ ಜಮೀರ್ ಹಮದ್ ವಿರುದ್ಧವೂ ಆರೋಪ ಕೇಳಿಬಂದಿದ್ದು, ಈ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ರಾಮದಾಸ್, ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಅವರ ಮನೆ ಮುಂದೆ ನಾನು ವಾಚ್ ಮ್ಯಾನ್ ಆಗುತ್ತೇನೆ ಎಂದು ಹೇಳಿ ವರ್ಷಗಳು ಉರುಳಿದವು, ಇನ್ನೂ ಅದರ ಕುರುಹು ಕಾಣುತ್ತಿಲ್ಲ.! ಇನ್ನು ಸಂಜನಾ ಜೊತೆ ಕೊಲಂಬೋ ಹೋಗಿದ್ದು ಸಾಬೀತಾದರೆ ನೀವು ನಿಜಕ್ಕೂ ಆಸ್ತಿ ಬರೆದುಕೊಡುತ್ತೀರೆ ಜಮೀರ್.? ಎಂದು ಪ್ರಶ್ನಿಸಿದ್ದಾರೆ.

Home add -Advt

ಕೊಲಂಬೋದಲ್ಲಿ ಕ್ಯಾಸಿನೋ ದಲ್ಲಿ ನಟಿ ಸಂಜನಾ ಜತೆ ಭಾಗಿಯಾಗಿರುವ ಬಗ್ಗೆ ತನ್ನ ಮೇಲಿರುವ ಆರೋಪ ಸಾಬೀತಾದರೆ ತನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುವುದಾಗಿ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು.

Related Articles

Back to top button