Latest

ಕುಮಾರಸ್ವಾಮಿ ಜತೆ ಕೊಲಂಬೊಗೆ ಹೋಗಿದ್ದೆ ಎಂದ ಶಾಸಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ಶ್ರೀಲಂಕಾದ ಕೊಲಂಬೊಗೆ ಹೋಗಿದ್ದು ನಿಜ. ಕೊಲಂಬೊಗೆ ಹೋಗುವುದು ತಪ್ಪಾ, ಕೇಂದ್ರ ಸರ್ಕಾರ ಕೊಲಂಬೊ ಗೆ ಹೋಗುವುದನ್ನು ನಿಷೇಧಿಸಿದೆಯೇ ಎಂದು ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೊಲಂಬೋಗೆ ಹೋಗಿದ್ದು ನಿಜ. ಆದರೆ ಪ್ರಶಾಂತ್ ಸಂಬರಗಿ ಮಾಡುತ್ತಿರುವ ಆರೋಪದಂತೆ ಸಂಜನಾ ಜತೆ ನಾನು ಹೋಗಿಲ್ಲ. ಅವರು ಮಾಡಿದ ಆರೋಪ ಸಾಬೀತಾದರೆ ನನ್ನ ಆಸ್ತಿ ಸರ್ಕಾರಕ್ಕೆ ಬರೆದುಕೊಡಲು ಸಿದ್ಧ ಎಂದರು.

Home add -Advt

ಕೊಲಂಬೋಗೆ ಎಲ್ಲರೂ ಹೋಗುತ್ತಾರೆ. ನಾನು ಪ್ರತಿ ವರ್ಷವೂ ಹೋಗುತ್ತೇನೆ. ಜೆಡಿಎಸ್ ನಲ್ಲಿದ್ದಾಗಲೂ ಹೋಗಿದ್ದೆ. ಕುಮಾರಸ್ವಾಮಿ ಜತೆಯೂ ಕೊಲಂಬೊಗೆ ಹೋಗಿದ್ದೆ. 26 ಶಾಸಕರು ಕೂಡ ಕೊಲಂಬಕ್ಕೆ ಹೋಗಿದ್ದರು. ಇನ್ನು ಕ್ಯಾಸಿನೋ ಕಾನೂನು ಬಾಹೀರವೇನೂ ಅಲ್ಲ. ಹಾಗಂತ ಕೇಂದ್ರ ಸರ್ಕಾರ ಹೇಳಿದೆಯೇ ಎಂದು ಗುಡುಗಿದ್ದಾರೆ.

ಡ್ರಗ್ಸ್ ಜಾಲದ ಜತೆ ನನಗೆ ನಂಟಿಲ್ಲ. ನನಗೆ ಡ್ರಗ್ಸ್ ಮಾಫಿಯಾ ನಂಟಿದೆ ಎಂಬುದಾದರೆ ನನ್ನನ್ನು ಗಲ್ಲಿಗೇರಿಸಲಿ. ಜನಪ್ರತಿನಿಧಿಯಾಗಿ ಆಯ್ಕೆಯಾದವರು ಇಂತಹ ಕೆಲಸದಲ್ಲಿದ್ದರೆ ಅವರಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Related Articles

Back to top button