Kannada NewsKarnataka NewsLatest

ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಳೆಬೈಲ್ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಣವನ್ನು ಮಂಜೂರು ಮಾಡಿಸಿದ್ದು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಎಳೆಬೈಲ್ ಗ್ರಾಮಸ್ಥರೊಂದಿಗೆ ಭೂಮಿ ಪೂಜೆ  ಕೈಗೊಂಡು ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದರು.

Home add -Advt

ಈ ರಸ್ತೆಯು ಎಳೆಬೈಲ್ ಗ್ರಾಮದಿಂದ ರಕ್ಕಸಕೊಪ್ಪ ಮುಖ್ಯ ರಸ್ತೆಯಿಂದ ಮರಾಠಾ ಮಂಡಳ ಶಿವರಾಜ ಪ್ರೌಢಶಾಲೆಯವರೆಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದಾಗಿ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಲಭಿಸಲಿದೆ ಎಂದು ಅವರು ಹೇಳಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಮನೋಹರ ಬೆಳಗಾಂವ್ಕರ, ಗುಂಡು ಪಾಟೀಲ, ಮಹೇಶ ಪಾಟೀಲ, ನಾಮದೇವ, ಮರಗಾಳಿ, ಪರಶುರಾಮ ಕೇಸರಕರ, ಮಲ್ಲಪ್ಪ ಪಾಟೀಲ, ಮೋನಪ್ಪ ಮರಗಾಳೆ, ನಾಮದೇವ್ ಅಷ್ಟೇಕರ, ಜ್ಯೋತಿಬಾ ಪಾಟೀಲ, ಪರಶುರಾಮ ಪಾಟೀಲ, ವಿಲಾಸ ಪಾಟೀಲ, ನಿಂಗಪ್ಪ ಮೋರೆ, ಶ್ರೀಕಾಂತ ಪಾಟೀಲ, ಕಾಶೀನಾಥ್ ಮೋರೆ, ಪಕ್ಷದ ಕಾರ್ಯಕರ್ತರು ಹಾಗೂ ಆಪ್ತ ಸಹಾಯಕರು ಉಪಸ್ಥಿತರಿದ್ದರು.

ಖಾನಾಪುರದಲ್ಲಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

Related Articles

Back to top button