Belagavi NewsBelgaum NewsKannada NewsKarnataka NewsLatest

ರಾಜಹಂಸಗಡದಲ್ಲಿ ರಾಷ್ಟ್ರ ಧ್ವಜ ಹಾರಿಸಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಂಗಳವಾರ ಐತಿಹಾಸಿಕ ರಾಜಹಂಸಗಡ ಕೋಟೆಯ ಮೇಲೆ ಇದೇ ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಆರಂಭದಲ್ಲಿ ಸಿದ್ದೇಶ್ವರ ಮಂದಿರದಲ್ಲಿ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅವರು, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನಾಪಡೆಯ 15 ಸೈನಿಕರನ್ನು ಸನ್ಮಾನಿಸಿದರು.

ಯುರಾಜ ಕದಂ, ಬಸವರಾಜ ಮ್ಯಾಗೋಟಿ, ಎಸ್.ಎಂ.ಬೆಳವಟ್ಕರ, ಸಿದ್ಧಪ್ಪ ಛತ್ರಿ, ಭಾವು ಪವಾರ, ಭರಮಾ ಪಾಟೀಲ, ಅನಿಲ ಪಾಟೀಲ, ಮಲ್ಲಿಕಾರ್ಜುನ ಲೋಕೂರ, ಸಂಜೀವ ಮಾದರ, ನಾಮದೇವ ನಾಗೇನಟ್ಟಿ, ರಘು ಖಾಂಡೇಕರ, ಪದ್ಮರಾಜ ಪಾಟೀಲ, ಸಾತೇರಿ ಕೋಕಿತ್ಕರ್, ಸ್ಥಳೀಯ ಜನಪ್ರತಿನಿಧಿಗಳು, ಸುತ್ತಲಿನ ನಾಗರಿಕರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button