Kannada NewsKarnataka NewsLatest

*PWD ಇಲಾಖೆ ಸಹಾಯಕ ಇಂಜಿನಿಯರ್ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಓರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮಂಜು ಪ್ರಸಾದ್ (33) ಆತ್ಮಹತ್ಯೆಗೆ ಶರಣಾಗಿರುವ ಸಹಾಯಕ ಇಂಜಿನಿಯರ್. ತುಮಕೂರು ತಾಲೂಕಿನ ದೇವರಾಯನದುರ್ಗದ ಬೆಟ್ಟದಿಂದ ಜಿಗಿದು ಮಂಜು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾವಗಡದ ಪಿಡಬ್ಲ್ಯೂ ಡಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜು ಪ್ರಸಾದ್ ತುಮಕೂರಿನ ಸತ್ಯಮಂಗಲದಲ್ಲಿ ವಾಸವಾಗಿದ್ದರು. ಒಂದೂವರೆ ವರ್ಷದ ಹಿಂದೆ ತಾಯಿ ಕಳೆದುಕೊಂಡು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು. ಈ ಬಗ್ಗೆ ಮಂಜು ಪ್ರಸಾದ್ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಕೊರಟಗೆರೆಯಲ್ಲಿರುವ ಸಂಬಂಧಿಕರ ಕೈಗೆ ಮೊಬೈಲ್, ಮನೆ ಕೀ ಕೊಟ್ಟು ಹೋಗಿದ್ದರು. ಮೀಟಿಂಗ್ ಇದೆ ದೇವರಾಯನದುರ್ಗಕ್ಕೆ ಹೋಗುತ್ತೇನೆ ಎಂದಿದ್ದರು. ಹೀಗೆಂದು ಬಂದವರೇ ದೇವರಾಯನದುರ್ಗದ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

ಕುಟುಂಬದವರು ಅನುಮಾನಗೊಂಡು ಪರಿಶೀಲಿಸಿದಾಗ ಮಂಜು ಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.

Related Articles

Back to top button