GIT add 2024-1
Laxmi Tai add
Beereshwara 33

ರಾಷ್ಟ್ರದ ಭದ್ರತೆ, ವಿಶ್ವಮಾನ್ಯತೆಗಾಗಿ ಮತ್ತೊಮ್ಮೆ ಮೋದಿ ಅಗತ್ಯ – ಜೊಲ್ಲೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, *ಕುಡಚಿ* : ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕುಡಚಿ ಮತಕ್ಷೇತ್ರದ ಆಲಖನೂರು ಗ್ರಾಮದಲ್ಲಿ  ಬಿಜೆಪಿ ಕುಡಚಿ ಮಂಡಲದ ಪದಾಧಿಕಾರಿಗಳ ಹಾಗೂ ಬೂತ್ ಅಧ್ಯಕ್ಷರ, ಬಿಎಲ್‌ಎ – 2 ಗಳ ಸಭೆ‌ ಹಾಗೂ ಚುನಾವಣೆ ಪೂರ್ವತಯಾರಿ ಕುರಿತು *ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಸುದೀರ್ಘವಾಗಿ ಚರ್ಚಿಸಿ, ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರ ಸದಸ್ಯರಿಗೆ ತಮ್ಮ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 3 ನೇ ಅವಧಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರ ಮನೆ ಮನಗಳಿಗೆ ತಲುಪಿಸಬೇಕು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಆದ ಪ್ರತಿಯೊಂದು ಅಭಿವೃದ್ಧಿ ಕಾರ್ಯವನ್ನು ಜನರಿಗೆ ಮನದಟ್ಟು ಮಾಡಬೇಕು ಎಂದು ತಿಳಿಸಿದರು.

Emergency Service

ರಾಷ್ಟ್ರದ ಭದ್ರತೆ ಮತ್ತು ಭಾರತಕ್ಕೆ ವಿಶ್ವ ಮಾನ್ಯತೆಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ತುರ್ತು ಅಗತ್ಯವಾಗಿದೆ. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಯಾವುದೇ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಾಗಿ ಶ್ರಮಿಸೋಣ ಎಂದು ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ  ಶಾಸಕರಾದ ಅಭಯ ಪಾಟೀಲ, ದುರ್ಯೊಧನ ಐಹೋಳೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಲ್ಲಾಧ್ಯಕ್ಷರಾದ ಸತೀಶ ಅಪ್ಪಾಜಿಗೋಳ, ಮಾಜಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ನವಿನಾಳೆ, ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಕುಡಚಿ ಮಂಡಲದ ಪ್ರಭಾರಿ ರಾಜಶೇಖರ ಖನದಾಳೆ, ಸಂಚಾಲಕರಾದ ಮಲ್ಲಿಕಾರ್ಜುನ ಖಾನಗೌಡರ, ರಮೇಶ ಖೇತಗೌಡರ, ಬಸನಗೌಡ ಆಸಂಗಿ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು‌.

Bottom Add3
Bottom Ad 2