ಪ್ರಗತಿವಾಹಿನಿ ಸುದ್ದಿ : ಉತ್ತರ ಪ್ರದೇಶದ ಮಹಾಕುಂಭಮೇಳದ ಕಾಲ್ತುಳಿತ ಪ್ರಕರಣ ಅನೇಕ ಅನುಮಾನಗಳನ್ನು ಹುಟ್ಟುಹಾಕಿತ್ತು. ದೇಶದೆಲ್ಲೆಡೆ ವ್ಯಾಪಕ ಚರ್ಚೆಗೂ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಎಂ.ಪಿ ಸಂಜಯ್ ರಾವತ್ ಮತ್ತೊಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ನಾನು ಕಣ್ಣಾರೆ ಕಂಡಿದ್ದೇನೆ ಪ್ರಯಾಗ್ ರಾಜ್ ನಲ್ಲಿ ನಡೆದ ಕಾಲ್ತುಳಿತದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಪ್ರಾಣಬಿಟ್ಟರು. ಎಲ್ಲವನ್ನೂ ನಾವು ಕಣ್ಣಾರೆ ಕಂಡಿದ್ದೇವೆ ಎಂದು ಹೇಳಿದ್ದಾರೆ.
ನಿಖರ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗಿದೆ. ದುರಂತಕ್ಕೆ ಕಣ್ಣಾರೆ ಸಾಕ್ಷಿಯಾಗಿ ನಾವು ಇದ್ದೆವು. ಜನರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಜನಸಂದಣಿ ಹೆಚ್ಚಾದಾಗ ಕಾಲ್ತುಳಿತ ಸಂಭವಿಸಿತು ಎಂದು ತಿಳಿಸಿದ್ದಾರೆ.
ಸಂಜಯ್ ರಾವತ್ ಹೇಳಿಕೆ ದೊಡ್ಡ ಸಂಚಲನ ಉಂಟುಮಾಡಿದೆ. ಈಗಾಗಲೇ ಕಾಲ್ತುಳಿತದ ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ರಾವತ್ ಹೇಳಿಕೆ ಬಳಿಕ ಪೊಲೀಸರು ಯಾವ ದಿಕ್ಕಿನಲ್ಲಿ ತನಿಖೆ ಕೈಗೊಳ್ಳುತ್ತಾರೆ ಅನ್ನೋದೇ ಕುತೂಹಲವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ