NationalTravel

*15ರ ವರೆಗೆ ಉತ್ತರ ಭಾರತದ ಬಹುತೇಕ ಏರ್ ಪೋರ್ಟ್‌ಗಳು ಬಂದ್*

ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ದೇಶದ 24 ಏರ್‌ಪೋರ್ಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುಲಾಗಿದೆ.

15ರ ವರೆಗೆ ಉತ್ತರ ಭಾರತದ ಬಹುತೇಕ ಏರ್ ಪೋರ್ಟ್‌ಗಳು ಬಂದ್ ಆಗಿರುತ್ತವೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಆದೇಶ ಹೊರಡಿಸಿದೆ.

ಅಧಮ್‌ಪು‌ರ್, ಅಂಬಾಲಾ, ಅಮೃತಸರ, ಆವಂತಿಪುರ, ಬಟಿಂಡಾ, ಭುಜ್, ಬಿಕನೇ‌ರ್, ಚಂಡೀಗಢ, ಹಲ್ವಾರಾ, ಹಿಂಡನ್, ಜಮ್ಮು, ಜೈಸರ್, ಜಾಮ್‌ನಗರ, ಜೋಧಪುರ, ಕಾಂಡ್ಲಾ, ಕಂಗ್ರಾ, ಕೆಶೋದ್‌, ಕಿಶನ್‌ಗಢ, ಕುಲು ಮನಾಲಿ, ಲೇಹ್, ಲೂಧಿಯಾನ, ಮುಂದ್ರಾ, ನಲಿಯಾ, ಪಠಾಣ್‌ಕೋಟ್‌, ಪಟಿಯಾಲ, ಪೋರಬಂದ‌ರ್, ರಾಜ್‌ಕೋಟ್, ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯಿಸ್ ಮತ್ತು ಉತ್ತರಲೈ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button