World

*ಪಾಕಿಸ್ತಾನದ 6 ಡ್ರೋನ್ ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ*

ಪ್ರಗತಿವಾಹಿನಿ ಸುದ್ದಿ: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಮುಂದುವರೆದಿದ್ದು, ಪಾಕಿಸ್ತಾನ ಸೇನೆ ಭಾರತದ ಮೇಲೆ ಅಪ್ರಚೋದಿತ ಡ್ರೋನ್, ಶೆಲ್ ದಾಳಿ ನಡೆಸಿದೆ.

ಗುಜರಾತ್ ನ ಕಚ್ ಮೇಲೆ ಪಾಕಿಸ್ತಾನ ಸೇನೆ ಡ್ರೋನ್ ದಾಳಿ ಗೆ ಯತ್ನಿಸಿದ್ದು, ಭಾರತೀಯ ಸೇನೆ ಪಾಕ್ ನ 6 ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಇನ್ನೊಂದೆಡೆ ಅಮೃತಸರದಲ್ಲಿ ಪಾಕಿಸ್ತಾನದ ಮಿಸೈಲ್ ದಾಳಿಗೆ ಭಾರಿ ಗಾತ್ರ‍ದ ಹೊಂಡ ನಿರ್ಮಾಣವಾಗಿದೆ. ಭಾರತ್ಯ ಸೇನೆ ಪಾಕ್ ಮಿಸೈಲ್ ದಾಳಿಯನ್ನು ವಿಫಲಗೊಳಿಸಿದೆ.

ಇದೇ ವೇಳೆ ಪಾಕ್ ಸೇನ್ನೆ ಜಮ್ಮುವಿನ ಬಿಎಸ್ ಎಸ್ ಎಫ್ ಪೋಸ್ಟ್ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button