Latest

8 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ

 ಪ್ರಗತಿವಾಹಿನಿ ಸುದ್ದಿ, ತಾಳಿಕೋಟೆ – ಪಟ್ಟಣದ ಮಹಲಗಲ್ಲಿ ಬಡಾವಣೆಯ ಗುಲಜಾರ ಸದ್ದಾಂಹುಸೇನ ಲಾಹೋರಿ(೨೫) ಇವಳು ತನ್ನ ೮ ತಿಂಗಳ ಮಗು ಆರಫೀಯಾಳಗೆ ಆಸ್ಪತ್ರೆಗೆ ತೊರಿಸಿಕೊಂಡು ಬರುತ್ತೇನೆಂದು ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ಪತಿ ಸದ್ದಾಂಹುಸೇನ ಅಬ್ದುಲ್‌ರಹೇಮಾನ ಲಾಹೋರಿ ಇವರು ಪೊಲೀಸ್‌ಠಾಣೆಗೆ ದೂರು ಸಲ್ಲಿಸಿದ್ದಾರೆ.

ಕಾಣೆಯಾದ ಗುಲಜಾರ ಇವಳು ೪ ಪೂಟು ೬ ಇಂಚು ಏತ್ತರ, ಗುಂಡು ಮುಖ, ಸಾದಾ ಗೋಧಿ ಬಣ್ಣ, ಮೈಯಿಂದ ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಅವಳ ಜೊತೆ ೮ ತಿಂಗಳ ಮಗಳು ಇದ್ದು ಈ ಚಹರೆಉಳ್ಳ ಮಹಿಳೆ ಎಲ್ಲಿಯಾದರೂ ಕಂಡುಬಂದಲ್ಲಿ ತಾಳಿಕೋಟೆ ಪೊಲೀಸ್‌ಠಾಣೆಯ ದೂ.೦೮೩೫೬೨೬೬೩೩೩, ಮೋ.೯೪೮೦೮೦೪೨೬೫, ಮಾಹಿತಿ ಸಲ್ಲಿಸಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button