Latest

ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪುಟಾಣಿ ಮಕ್ಕಳಿಬ್ಬರಿಗೂ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರ್ಗಿ ಜಿಲ್ಲೆಯ ಪಂಚಶೀಲ ನಗರದಲ್ಲಿ ನಡೆದಿದೆ.

26 ವರ್ಷದ ತಾಯಿ ದೀಕ್ಷಾ ತನ್ನ ಇಬ್ಬರು ಮಕ್ಕಳಾದ 2 ವರ್ಷದ ಸಿಂಚನಾ ಹಾಗೂ 3 ವರ್ಷದ ಧನಂಜಯನಿಗೆ ಬೆಂಕಿ ಹಚ್ಚಿ ಸಾಯಿಸಲು ಮುಂದಾಗಿದ್ದಾಳೆ ಈ ವೇಳೆ ಮಕ್ಕಳಿಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ತಾಯಿ ಧೀಕ್ಷಾ ಇಬ್ಬರು ಮಕ್ಕಳನ್ನು ಕಟ್ಟಿ ಹಾಕಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Home add -Advt

ಮಕ್ಕಳ ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಮಕ್ಕಳನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಟ್ಟ ಗಾಯಗಳಿಂದ ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಗಂಡ, ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ದೀಕ್ಷಾ ಆತ್ಮಹತ್ಯೆ ಮಾಡಿಕಿಂಡಿದ್ದಾಳೆ ಎಂದು ದೀಕ್ಷಾ ಪೋಷಕರು ಆರೋಪಿಸಿದ್ದಾರೆ. ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಬೆಂಕಿ ದುರಂತ; ಒಂದೇ ಕುಟುಂಬದ ನಾಲ್ವರ ದುರ್ಮರಣ

ಸಸಿಗಳನ್ನು ನೆಟ್ಟು ಇತರರಿಗೆ ಪ್ರೇರಣೆ ಯಾದ ಅಂಧ ಮಕ್ಕಳು,

Related Articles

Back to top button