Politics

ಸಿಎಂ ಪತ್ನಿಗೆ ‌ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ; ಸಚಿವ ರಾಜಣ್ಣ

ಪ್ರಗತಿವಾಹಿನಿ ಸುದ್ದಿ:  ಮುಡಾ ಕೇಸ್ ನಲ್ಲಿ ಸಿಎಂ ಪತ್ನಿಗೆ ‌ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು, ಈ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಮುಡಾ ಕೇಸ್ ನಲ್ಲಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೋಟಿಸ್‌ ವಿಚಾರವಾಗಿ ಬೆಂಗಳೂರಲ್ಲಿ ಮಾತಾಡಿದ ಅವರು,ಸಿಎಂ ಪತ್ನಿಗೆ ‌ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು, ಈ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು.

ಶಾಸಕರಿಗೆ ಅನುದಾನ ಬಿಡುಗಡೆ ಕೊರತೆ ವಿಚಾರಕ್ಕೆ ಮಾತಾಡಿದ ಅವರು, ಶಾಸಕರು ಕೇಳ್ತಿರೋದ್ರಲ್ಲಿ ತಪ್ಪಿಲ್ಲ. ನ್ಯಾಯ ಸಮ್ಮತವಾಗಿಯೇ ಇದೆ. ಶಾಸಕರು ಅವರ ಮನೆಗೆ ಅನುದಾನ ಕೇಳ್ತಾಯಿಲ್ಲ. ಹಂತಹಂತವಾಗಿ ಅವರಿಗೆ ಅನುದಾನ ಬಿಡುಗಡೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದರು.

ನಾಯಕತ್ವದ ಬಗ್ಗೆ ನಾವು ಏನೂ ಮಾತಾಡಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ರಾಮುಲು ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರುವ ವಿಚಾರ ಅಲ್ಲಗೆಳೆಯುವಂತಿಲ್ಲ. ರಾಜಕೀಯ ನಿಂತ ನೀರಲ್ಲ. ರಾಮುಲು ಅವರಿಗೆ ಪಕ್ಷಕ್ಕೆ ಬನ್ನಿ ಅಂತಾ ಒತ್ತಡ ಹಾಕಲ್ಲ. ಅವರು ನಮ್ಮ ಸಮುದಾಯದ ಪ್ರಬಲ ನಾಯಕ. ಅವರು ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದು ರಾಜಣ್ಣ ತಿಳಿಸಿದರು.

Home add -Advt

Related Articles

Back to top button