Politics

*ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಗಸ್ಟ್ 31ಕ್ಕೆ ವಿಚಾರಣೆ ಮುಂದೂಡಿದೆ.

ಇಂದು ಅರ್ಜಿ ವಿಚಾರಣೆ ವೇಳೆ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸುದೀರ್ಘ ವಾದ ಮಂಡನೆ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರ ವಕೀಲ ತುಷಾರ್ ಮೆಹ್ತಾ ಶನಿವಾರ ವಾದ ಮಂಡನೆ ಮಾಡುವುದಾಗಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಆಗಸ್ಟ್ 31ರ ಬೆಳಿಗ್ಗೆ 10:30ಕ್ಕೆ ಮುಂದೂಡಿದೆ. ಅಲ್ಲದೇ ಈ ಹಿಂದಿನ ಮಧ್ಯಂತರ ಆದೇಶವನ್ನೂ ಮುಂದುವರೆಸಿದೆ.

ನ್ಯಾಯಾಲಯದಲ್ಲಿ ನಡೆದ ಕಲಾಪ ಹೀಗಿದೆ:

 1992ರಲ್ಲಿ ನೋಟಿಫಿಕೇಷನ್‌ ಆಗಿದೆ

1998ರಲ್ಲಿ ಡಿನೋಟಿಫೈ ಮಾಡಲಾಗಿದೆ..

ನಿಂಗನ ಹೆಸರಲ್ಲಿ ಡಿನೋಟಿಫೈ ಆಗಿದೆ..

2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹೆಸರಿಗೆ ಸೇಲ್‌ಡೀಡ್ ಆಗಿದೆ..

2005ರಲ್ಲಿ ಭೂಪರಿವರ್ತನೆ ಆಗಿದೆ..

2010 ರಲ್ಲಿ ದಾನ ಮಾಡಲಾಗಿದೆ.

2015 ರಲ್ಲಿ ಮೂಡ ಬಳಕೆ ಮಾಡಿದ್ದರಿಂದ ಭೂಮಿಗೆ ಪರಿಹಾರ ಕೇಳಲಾಗಿದೆ..

ಇದನ್ನ ದೊಡ್ಡ ಹಗರಣದಂತೆ ಬಿಂಬಿಸಲಾಗುತ್ತಿದೆ..

ಇದರಲ್ಲಿ ಸಿದ್ದರಾಮಯ್ಯ ಯಾವುದೇ ಪಾತ್ರವಹಿಸಿಲ್ಲ

*ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ ವಾದ* 

‘ *ರಾಜ್ಯಪಾಲರು ಅನುಮತಿ ಕೊಡುವಾಗ ವಿವೇಚನೆಯನ್ನೇ ಬಳಸಿಲ್ಲ’* 

ಅಬ್ರಹಾಂ, ರಾಜ್ಯಪಾಲರಿಗೆ ಕೊಟ್ಟ ದೂರಿನ ಅಂಶ ಓದಿದ ವಕೀಲ ಅಭಿಷೇಕ್ ಮನು ಸಿಂಘ್ವಿ

ಈ ಕೇಸ್​ ಸಿಬಿಐಗೆ ವಹಿಸಲು ಡಿಜಿಗೆ ಆದೇಶ ನೀಡಿ ಎಂದು ಮನವಿ ಮಾಡಿದ್ದಾರೆ

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ

ಇದರಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿರುವ ಅಂಶ ಎಲ್ಲಿದೆ?

ರಾಜ್ಯಪಾಲರು ತಮ್ಮ ವಿವೇಚನೆ ಬಳಸದೇ ಷೋಕಾಸ್ ನೋಟಿಸ್​ ನೀಡಿದರು

ಹೆಚ್ಚು, ಹೆಚ್ಚು ಬಲೆ ಹೆಣೆದಷ್ಟು ನೀವು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು- ಸಿಂಘ್ವಿ ವಾದ

—————–

ಟಿ.ಜೆ. ಅಬ್ರಹಾಂ ಕೊಟ್ಟ ದೂರಿಗೆ ಮಾತ್ರ ರಾಜ್ಯಪಾಲರು ಷೋಕಾಸ್ ನೋಟಿಸ್ ಕೊಟ್ಟಿದ್ದಾರೆ. 

ಮೂವರು ದೂರುದಾರರಿಗೆ ಸೇರಿಸಿ ತನಿಖೆಗೆ ಅನುಮತಿ ಕೊಟ್ಟಿದ್ದಾರೆ

ಮೂವರು ದೂರುದಾರರ ಪೈಕಿ ಒಬ್ಬರು ಅನುಮತಿಗೆ ಮನವಿಯನ್ನೇ ಮಾಡಿಲ್ಲ. 

—————-

ರಾಜ್ಯಪಾಲರ ಅನುಮತಿ ಇಲ್ಲದೇ ದೂರುದಾರರು ಮುಂದುವರಿಯಬಹುದಾ?

ಮುಂದುವರಿಯಬಹುದು ಎಂದು ನೀವು ವಾದಿಸುತ್ತಿದ್ದೀರಾ ?

ಸಿಎಂ ಪರ ವಕೀಲ ಸಿಂಘ್ವಿಗೆ ಜಡ್ಜ್ ಪ್ರಶ್ನೆ

ನಾನು ಹಾಗೆ ಹೇಳುತ್ತಿಲ್ಲ ಎಂದ ಸಿಂಘ್ವಿ

ಬೀದಿಯಲ್ಲಿ ಹೋಗುವವರು, ರಾಜ್ಯಪಾಲರ ಬಳಿ ಪೂರ್ವಾನುಮತಿ ಬೇಕೆನ್ನುತ್ತಾರೆ

ರಾಜ್ಯಪಾಲರು ತಕ್ಷಣ ಅನುಮತಿ ಕೊಟ್ಟು ಬಿಡುತ್ತಾರೆ. 

ಈಗ ದೂರುದಾರರೇ ಅನುಮತಿ ಅವಶ್ಯಕತೆ ಇಲ್ಲ ಎನ್ನುತ್ತಾರೆ

ಒಂದೋ ದೂರುದಾರರ ಅಫಿಡವಿಟ್ ವಾಪಸ್​ ಪಡೆಯಲಿ, 

ಅಥವಾ ಕೋರ್ಟ್​ ರಾಜ್ಯಪಾಲರ ಅನುಮತಿ ರದ್ದುಪಡಿಸಲಿ- ಸಿಂಘ್ವಿ

————

17ಎ, 19, 218 ಕಲಂಗಳ ಅಡಿಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ಕೇಳಿದ್ದಾರೆ. 

ಕೋರ್ಟ್​ಗೆ ಸಲ್ಲಿಸಿದ ಆಕ್ಷೇಪಣೆಯಲ್ಲಿ 17ಎ ಅವಶ್ಯಕತೆ ಇಲ್ಲ ಎಂದಿದ್ದಾರೆ

‘ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ 17ಎ ಉಲ್ಲೇಖಿಸಿಲ್ಲ’

‘ರಾಜ್ಯಪಾಲರು ಸ್ವಯಂ ಪ್ರೇರಿತವಾಗಿ ಪೂರ್ವಾನುಮತಿ ಕೊಟ್ಟಿಲ್ಲ’

‘ದೂರುದಾರರ ದೂರು ಆಧರಿಸಿ ಅನುಮತಿ ಕೊಟ್ಟಿದ್ದಾರೆ’

ಈಗ ದೂರುದಾರರೇ ಅನುಮತಿ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ’

‘ಈ ಸಂದರ್ಭದಲ್ಲಿ ರಾಜ್ಯಪಾಲರು ತಾವು ಕೊಟ್ಟ ಅನುಮತಿ ವಾಪಸ್​ ಪಡೆಯಲ್ಲ’

ಅನುಮತಿ ಅವಶ್ಯಕತೆ ಇಲ್ಲ ಎಂದ ಮೇಲೆ ಕೋರ್ಟ್ ರದ್ದುಪಡಿಸಬಹುದು

—————

‘ದೂರುದಾರರ ದೂರನ್ನೇ ವಜಾಗೊಳಿಸಬೇಕು’

‘ದೂರುದಾರರನ್ನೇ ತನಿಖೆಗೊಳಪಡಿಸಲು ಆದೇಶಿಸಬೇಕು’

‘ದೂರುದಾರರಿಗೆ ನ್ಯಾಯಾಲಯ ದಂಡ ವಿಧಿಸಬೇಕು’

‘ರಾಜ್ಯಪಾಲರ ಬಳಿ ತನಿಖೆಗೆ ಅವಕಾಶ ಕೇಳಿ ಸಮಯ ವ್ಯರ್ಥ ಮಾಡಿದ್ದಾರೆ’

‘ದೂರುದಾರ ಕೋರ್ಟ್ ಸಮಯವನ್ನೂ ವ್ಯರ್ಥ ಮಾಡಿದ್ದಾರೆ’

ಇದೊಂದು ಕಾಲ್ಪನಿಕ ದೂರು- ಸಿಎಂ ಪರ ಸಿಂಘ್ವಿ ವಾದ

—————

‘17ಎ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಇದೆ’

‘ಇಂಥ ಪ್ರಕರಣಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಮಾರ್ಗಸೂಚಿ’

‘2021ರಲ್ಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ’

‘ಪ್ರತಿವಾದಿಗಳ ಆಕ್ಷೇಪಣೆ ಹಾಸ್ಯಾಸ್ಪದವಾಗಿದೆ’

‘17ಎ ಅವಶ್ಯಕತೆ ಇಲ್ಲ ಎಂದು ಒಂದೆಡೆ ಬರೆದಿದ್ದಾರೆ’

‘ಈ ಹಂತದಲ್ಲಿ 17ಎ ಅವಶ್ಯಕತೆ ಇಲ್ಲ ಎಂದು ಬರೆದಿದ್ದಾರೆ’. 

—————

‘ಮುಡಾ ಕೇಸ್​ನಲ್ಲಿ ಸಿದ್ದರಾಮಯ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’

‘ಸಿಎಂ -ಡಿಸಿಎಂ ಆಗಿ ಯಾವುದೇ ನಿರ್ಧಾರ, ಶಿಫಾರಸ್ಸು ತೆಗೆದುಕೊಂಡಿಲ್ಲ’

ಸಿಎಂ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ವಾದ

‘ಸಾರ್ವಜನಿಕ ಸೇವಕನ ಶಿಫಾರಸ್ಸು, ನಿರ್ಧಾರಗಳ ಕುರಿತು ತನಿಖೆ ಇರಬೇಕು’

‘ಈ ಎರಡನ್ನೂ ರಾಜ್ಯಪಾಲರು ಪಾಲನೆ ಮಾಡಿಲ್ಲ’

—————

ಸಿಎಂ ಸಿದ್ದರಾಮಯ್ಯ ಪರ ವಕೀಲ ಸಿಂಘ್ವಿ ವಾದ

‘ಭ್ರಷ್ಟಾಚಾರ ಕಾಯಿದೆ 17A ಕುರಿತು ವಾದ ಮಂಡಿಸಿದ್ದೆ’

‘ಭ್ರಷ್ಟಾಚಾರ ಕಾಯಿದೆ 17ಎ ಅಡಿ ಪೂರ್ವಾನುಮತಿ ಅವಶ್ಯಕತೆ ಇದೆ’

‘ಈ ಪಾಯಿಂಟ್ ಆಧರಿಸಿ ರಾಜ್ಯಪಾಲರ ಆದೇಶ ರದ್ದುಪಡಿಸಬೇಕು’

‘17ಎ ಅಡಿ ಪೊಲೀಸರು, ತನಿಖಾಸಂಸ್ಥೆ ಮಾತ್ರ ತನಿಖೆಗೆ ಅನುಮತಿ ಕೇಳಬೇಕು’

‘ಈ ಪ್ರಕರಣದಲ್ಲಿ ಯಾವುದೇ ಪೊಲೀಸರು ತನಿಖೆಗೆ ಅನುಮತಿ ಕೇಳಿಲ್ಲ’

‘ಜನಪ್ರತಿನಿಧಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತ್ರ ತನಿಖೆಗೆ ಅವಕಾಶ ಇದೆ’

ಸಿಎಂ ಸಿದ್ದರಾಮಯ್ಯ ಪರ ವಕೀಲ ಸಿಂಘ್ವಿ ವಾದ

‘ಜನಪ್ರತಿನಿಧಿಯ ಶಿಫಾರಸ್ಸು ಅಥವಾ ನಿರ್ಧಾರದ ಮಾತ್ರ ತನಿಖೆಗೆ ಅವಕಾಶ ಇದೆ’

ಈ ಪ್ರಕರಣದಲ್ಲಿ ಅಂತಹದ್ದು ಯಾವುದೂ ನಡೆದೇ ಇಲ್ಲ- ಸಿಂಘ್ವಿ

—————

‘ಅತ್ಯಬಿದ್ದರೆ ಲಿಖಿತ ವಿವರಣೆ ಸಲ್ಲಿಸುತ್ತೇವೆ’

ರಾಜ್ಯಪಾಲರ ಪರ ವಕೀಲರ ಮಾಹಿತಿ

ರಾಜ್ಯಪಾಲರ ವಿವರಣೆಗೆ ಕಾಯದೇ ವಿಚಾರಣೆ ನಡೆಸಿ ಎಂದ ಸಿಂಘ್ವಿ

—————

‘ಕಾನೂನಿನ ಪ್ರಶ್ನೆ ಇರುವುದರಿಂದ ರಾಜ್ಯಪಾಲರು ವಿವರಣೆ ಸಲ್ಲಿಸುವುದಿಲ್ಲ’

ದೂರುದಾರ ಪ್ರದೀಪ್ ಪರ ವಕೀಲ ಪ್ರಭುಲಿಂಗ ನಾವದಗಿ ವಾದ

—————

‘ರಾಜ್ಯಪಾಲರು ಯಾವುದೇ ವಿವರಣೆ ಸಲ್ಲಿಸುವುದಿಲ್ಲ’

‘ಅವಶ್ಯವಿದ್ದರೆ ರಾಜ್ಯಪಾಲರು ತಮ್ಮ ಕಡತ ಸಲ್ಲಿಸಲು ಸಿದ್ಧರಿದ್ದಾರೆ’

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪರ ವಕೀಲರ ಮಾಹಿತಿ

‘ಪ್ರತಿವಾದಿಗಳು ವಿವರಣೆ ಸಲ್ಲಿಸುವುದಿಲ್ಲ ಎಂದು ದಾಖಲಿಸಿ’

ಹೈಕೋರ್ಟ್​ಗೆ ಸಿಎಂ ಪರ ವಕೀಲ ಮನು ಸಿಂಘ್ವಿ ಮನವಿ

—————

‘ಕೆಲ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ’

‘ಈ ಆಕ್ಷೇಪಣೆ ಗೆ ನಮ್ಮ ಪ್ರತಿಕ್ರಿಯೆ ನೀಡಬೇಕಿದೆ’

ರಾಜ್ಯಪಾಲರು ಈಗಲೂ ಆಕ್ಷೇಪಣೆ ಸಲ್ಲಿಸಿಲ್ಲ  – ಸಿಂಘ್ವಿ

—————

ಹೈಕೋರ್ಟ್​ನಲ್ಲಿ  ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ

ನ್ಯಾ.ನಾಗಪ್ರಸನ್ನ ಪೀಠದಲ್ಲಿ ಸಿಎಂ ಅರ್ಜಿ ವಿಚಾರಣೆ

ಸಿಎಂ ಪರ ಅಭಿಷೇಕ್ ಮನುಸಿಂಘಿ ವಾದ ಮಂಡನೆ ಆರಂಭ

—————

ಎಲ್ಲರೂ ಆಕ್ಷೇಪಣೆ ಸಲ್ಲಿಸಿದ್ದಾರಾ- ಜಡ್ಜ್​

ಆಕ್ಷೇಪಣೆಗೆ ರಾಜ್ಯಪಾಲರು ಪ್ರತಿಕ್ರಿಯಿಸಿಲ್ಲ-ಸಿಂಘಿ

ರಾಜ್ಯಪಾಲರು ಆಕ್ಷೇಪಣೆ ಸಲ್ಲಿಸಿಲ್ಲ- ಸಿಂಘ್ವಿ


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button