Latest

ಮುರುಘಾಶ್ರೀ ಪ್ರಕರಣ; ವಾರ್ಡನ್ ರಶ್ಮಿ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಮುರುಘಾಶ್ರೀಗಳ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎರಡನೇ ಆರೋಪಿಯಾಗಿರುವ ಮುರುಘಾ ಮಠದ ಹಾಸ್ಟೇಲ್ ಮಹಿಳಾ ವಾರ್ಡನ್ ಅವರನ್ನು ವಶಕ್ಕೆ ಪಡೆದಿರುವ ಚಿತ್ರದುರ್ಗ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮುರುಘಾ ಮಠದ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದರೆ ಮುರುಘಾಶ್ರೀಗಳನ್ನು ವಿಚಾರಣೆ ನಡೆಸುವುದಾಗಿ ಚಿತ್ರದುರ್ಗ ಎಸ್ ಪಿ ಪರಶುರಾಮ ತಿಳಿಸಿದ್ದಾರೆ.

Home add -Advt

ಸ್ವಾಮಿಜಿಗಳಿಗೆ ಹಣ್ಣು ಕೊಟ್ಟು ಬನ್ನಿ ಎಂದು ವಾರ್ಡನ್ ರಶ್ಮಿ ಮಕ್ಕಳನ್ನು ಸ್ವಾಮೀಜಿ ಬಳಿ ಕಳುಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ. ಮುರುಘಾಶ್ರೀ ಸೇರಿದಂತೆ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಾರ್ಡನ್ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ. ದೂರು ದಾಖಲಾದ 6 ದಿನಗಳ ಬಳಿಕ ಈಗ ವಾರ್ಡನ್ ರಶ್ಮಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು ಮಂಜೂರು

https://pragati.taskdun.com/latest/s-k-basavarajansoubhagyabail/

Related Articles

Back to top button