Belagavi NewsBelgaum NewsKannada NewsLatest

*ಜನರ ನೆಮ್ಮದಿಯ ಜೀವನವೇ ಲಕ್ಷ್ಮೀ ಹೆಬ್ಬಾಳಕರ್ ಅವರ ಗುರಿ : ಮೃಣಾಲ ಹೆಬ್ಬಾಳಕರ್*

71 ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

Home add -Advt

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ರಣಕುಂಡೆ ಗ್ರಾಮದೊಳಗಿನ ರಸ್ತೆಗಳ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಬುಧವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಮಂಜೂರಾಗಿರುವ ಸುಮಾರು 71 ಲಕ್ಷ ರೂ,ಗಳ ಅನುದಾನದಲ್ಲಿ ರಸ್ತೆಗಳು ನಿರ್ಮಾಣಗೊಳ್ಳಲಿವೆ. ನಿಗದಿತ ಸಮಯದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮೃಣಾಲ ಹೆಬ್ಬಾಳಕರ್ ಗುತ್ತಿಗೆದಾರರಿಗೆ ಸೂಚಿಸಿದರು. ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸುಧಾರಣೆಯ ಕ್ರಾಂತಿ ನಡೆಯುತ್ತಿದ್ದು, ಜನರ ನೆಮ್ಮದಿಯ ಜೀವನವೇ ಲಕ್ಷ್ಮೀ ಹೆಬ್ಬಾಳಕರ್ ಅವರ ಗುರಿಯಾಗಿದೆ ಎಂದು ಅವರು ಹೇಳಿದರು.

ಈ ವೇಳೆ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಭರಮಣ್ಣ ಪಾಟೀಲ, ವಸಂತ ತಹಶಿಲ್ದಾರ, ನೂರ್ ದಶಕೆಲ್ದಾರ್, ನಿಂಗಪ್ಪ ಪಾಟೀಲ, ಬಾಬಾಜಾನ್ ಸಯ್ಯದ್, ಸಿದ್ದರಾಮ ಪಾಟೀಲ, ಬಾಳೇಶ್ ಜಾಂಬೋಟಿ, ನಿಯಾಜ ಬುಖಾರಿ, ಗುಂಡು ಜಾಂಬೋಟಿ, ರಾಮಲಿಂಗ ಮೊರೆ, ರವಳು ಪಾಟೀಲ, ಯಲ್ಲಪ್ಪ ಕಾಂಬಳೆ, ಮಾರುತಿ ಕೊಳೆಕರ್ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button