Latest

4ನೇ ಮಹಡಿಯಿಂದ ಬಿದ್ದ ಉದ್ಯಮಿ; ಮುಥೂಟ್ ಗ್ರೂಪ್ ಅಧ್ಯಕ್ಷ ಅಕಾಲಿಕ ಮರಣ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ತಮ್ಮ ಮನೆಯ ನಾಲ್ಕನೇ ಮಹಡಿಯಿಂದ ಜಾರಿಬಿದ್ದ ಪರಿಣಾಮ ಮುಥೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ.ಜಾರ್ಜ್ ಅಕಾಲಿಕವಾಗಿ ಸಾವನ್ನಪ್ಪಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ದೆಹಲಿಯ ಕೈಲಾಶ್ ನಲ್ಲಿರುವ ತಮ್ಮ ನಿವಾಸದಲ್ಲಿ ಜಾರ್ಜ್ ಮನೆಯ ನಾಲ್ಕನೇ ಫ್ಲೋರ್ ನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಎಂ.ಜಿ.ಜಾರ್ಜ್ ಸಾವು ಯಾವುದೇ ಅನುಮಾನಾಸ್ಪದ ಕೊಲೆ ಅಥವಾ ಕೃತ್ಯ ಎಂದು ಶಂಕೆಯಿಲ್ಲ. ಮಹಡಿಯಿಂದ ಬಿದ್ದು ಸಾವನ್ನಪ್ಪಿರುವುದು ದೃಢವಾಗಿದೆ ಎಂದು ಆಗ್ನೇಯ ದೆಹಲಿ ಆರ್.ಪಿ.ಮೀನಾ ತಿಳಿಸಿದ್ದಾರೆ.

 

Related Articles

Back to top button