Kannada NewsLatest

ಎಂಇಎಸ್ ಬ್ರೇನ್ ಎನ್.ಡಿ.ಪಾಟೀಲ್ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಂಇಎಸ್ ಬ್ರೇನ್ ಎಂದೇ ಕರೆಯಲ್ಪಡಬಹುದಾಗಿದ್ದ ಹಿರಿಯ ನಾಯಕ, ಮಾಜಿ ಸಚಿವ ನಾರಾಯಣ ಜ್ನಾನದೇವ್ ಪಾಟೀಲ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಕರ್ನಾಟಕ – ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂದಧಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಎನ್.ಡಿ.ಪಾಟೀಲ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿದ್ದರು.

ಹಲವಾರು ಬಾರಿ ಬೆಳಗಾವಿ ಕಾರ್ಯಕ್ರಮಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ಕನ್ನಡಿಗರನ್ನು ಕೆರಳಿಸಿದ್ದರು.

ಅನಾರೋಗ್ಯಕ್ಕೀಡಾಗಿದ್ದ ಎನ್.ಡಿ.ಪಾಟೀಲ್ ಅವರನ್ನು ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

Home add -Advt

ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟಗಾರರಾಗಿದ್ದ ಪಾಟೀಲ್, ಸಮಿತಿ ಪ್ರತಿ ವರ್ಷ ನಡೆಸುವ ಹುತಾತ್ಮ ದಿನದಂದೇ ವಿಧಿವಶರಾಗಿರುವುದು ಕಾಕತಾಳೀಯ.

ಸುಮಾರು 6 ದಶಕಗಳ ಕಾಲ ಕರ್ನಾಟಕ -ಮಹಾರಾಷ್ಟ್ರ ಗಡಿ ಹೋರಾಟದಲ್ಲಿ ತೊಡಗಿದ್ದ ಅವರು 1977-80ರಲ್ಲಿ ಮಹಾರಾಷ್ಟ್ರ ಸಹಕಾರದ ಸಚಿವರಾಗಿ, ಮಹಾರಾಷ್ಟ್ರ ರಾಜ್ಯ ಗಡಿ ಸಲಹಾ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
ವಾಯುವಿಹಾರಕ್ಕೆ ತೆರಳಿದ್ದ ದಂಪತಿಗೆ ಕಾರು ಡಿಕ್ಕಿ; ಪತಿ ಸ್ಥಳದಲ್ಲೇ ದುರ್ಮರಣ

Related Articles

Back to top button