Kannada NewsKarnataka News

ರಾಷ್ಟ್ರೀಯ ಕ್ರೀಡಾಪಟು, PDO ವಾಸುದೇವ ಐಕ್ರುತ ಹಠಾತ್ ನಿಧನ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಬೆಳಗಾವಿ ತಾಲ್ಲೂಕು ಉಚಗಾಂವ ಗ್ರಾಪಂ
ಪಿಡಿಒ ವಾಸುದೇವ ರಾಮಚಂದ್ರ ಐಕ್ರುತ (56) ಸೋಮವಾರ ಹೃದಯಾಘಾತದಿಂದ ನಿಧನರಾದರು.

Home add -Advt

ಸಂಜೆ ಕರ್ತವ್ಯದಿಂದ ಮರಳಿದ ಅವರು ಕೆಲಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿ ಮನೆಗೆ ಮರಳಿದ
ಕೂಡಲೇ ಕುಸಿದುಬಿದ್ದರು. ಅವರನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯುಸೇನೆಯ ವಿವಿಧ ಹುದ್ದೆಗಳಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿ
ನಿವೃತ್ತರಾಗಿದ್ದ ಅವರು, 2010ರಲ್ಲಿ ಗ್ರಾಮೀಣಾಭಿವೃಧ್ಧಿ ಇಲಾಖೆಯ ಪಿಡಿಒ ಹುದ್ದೆಗೆ
ಆಯ್ಕೆಯಾಗಿದ್ದರು. ಖಾನಾಪುರ ತಾಲೂಕಿನ ಗೋಲ್ಯಾಳಿ, ನೀಲಾವಡೆ, ಕಣಕುಂಬಿ, ಹಲಕರ್ಣಿ,
ಬೆಳಗಾವಿ ತಾಲೂಕಿನ ಪೀರನವಾಡಿ, ಕಂಗ್ರಾಳಿ, ಬಾಳೇಕುಂದ್ರಿ ಮತ್ತಿತರ ಗ್ರಾಪಂಗಳಲ್ಲಿ
ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ಉಚಗಾಂವ ಗ್ರಾಪಂಗೆ ವರ್ಗಗೊಂಡಿದ್ದರು.

ಮೂಲತಃ ಧಾರವಾಡದವರಾದ ಮೃತರು ಸೈಕ್ಲಿಂಗ್, ಓಟ, ಭಾರ ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ
ಕ್ರೀಡೆಗಳಲ್ಲಿ ಪರಿಣಿತಿ ಹೊಂದಿದ್ದರು. ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ
ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ
ಕ್ರೀಡಾಕೂಟಗಳಲ್ಲಿ ಜಯಗಳಿಸಿದ್ದರು. ಮೃತರಿಗೆ ತಂದೆ, ತಾಯಿ, ಪತ್ನಿ ಮತ್ತು ಪುತ್ರ
ಇದ್ದಾರೆ.
ಅವರ ಅಕಾಲಿಕ ನಿಧನಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ
ಹರ್ಷಲ್ ಭೂಯಾರ್ ಸೇರಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ
ಕಂಬನಿ ಮಿಡಿದಿದ್ದಾರೆ.

https://pragati.taskdun.com/vidhanasabha-electionbelagavisecurity/


Related Articles

Back to top button