ಸುಕುನುಂಡೆ (ಸುಕ್ರ ಉಂಡೆ)
ಹೆಸರು ಕಾಳು ಉಪಯೋಗಿಸಿ ಮಾಡುವ ವಿಶಿಷ್ಟ ಕರಿದ ಕಜ್ಜಾಯ. ದೇವಿ ಪೂಜೆಯಲ್ಲಿ ನೈವೇದ್ಯಕ್ಕೆ ಈ ಕಜ್ಜಾಯವನ್ನು ಹೆಚ್ಚಾಗಿ ಮಾಡುತ್ತಾರೆ.
ಬೇಕಾಗುವ ಸಾಮಗ್ರಿ:
ಹೆಸರುಕಾಳು 1 ಬೌಲ್ ,1 ಬೌಲ್ ಬೆಲ್ಲ , ಸ್ವಲ್ಪ ಹಸಿ ಕೊಬ್ಬರಿ ತುರಿ, 1 ಬೌಲ್ ಅಕ್ಕಿ ಹಿಟ್ಟು,ಮೈದಾ ಹಿಟ್ಟು 1ಚಮಚ ,ಸ್ವಲ್ಪ ಉಪ್ಪು, ಕರಿಯಲು ಸ್ವಲ್ಪ ಎಣ್ಣೆ.
ಮಾಡುವ ವಿಧಾನ:
ಹೆಸರು ಕಾಳು ಮುಳುಗುವಸ್ಟು ನೀರು ಹಾಕಿ 4-5 ತಾಸು ನೆನೆಸಬೇಕು. ನಂತರ ಹೆಸರು ಕಾಳನ್ನು ಕುಕ್ಕರಿನಲ್ಲಿ 3 ಸೀಟಿಹಾಕಿ ಬೇಯಿಸ ಬೇಕು. ಕಾಳು ಬೆಂದು ಮೃದುವಾಗಿರುತ್ತದೆ. ಹೆಚ್ಚಿಗೆ ಇದ್ದ ನೀರನ್ನು ಸೋಸಿ ತೆಗೆಯ ಬೇಕು ಕಾಳಿಗೆ ಬೆಲ್ಲ ಮತ್ತು ಕೊಬ್ಬರಿ ತುರಿ ಸೇರಿಸಿ ಹೋಳಿಗೆ ಹೂರಣದ ರೀತಿಯಲ್ಲಿ ಕಾಯಿಸಿ ಇಡಬೇಕು. ಈ ಹೂರಣವನ್ನು ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಬೇಕು.
ಅಕ್ಕಿ ಹಿಟ್ಟಿಗೆ ಮೈದಾಹಿಟ್ಟು, ರುಚಿಗೆ ಉಪ್ಪು ಸೇರಿಸಿ ಬೊಂಡಾ ಹಿಟ್ಟಿನ ಹದದಲ್ಲಿ ನೀರು ಹಾಕಿ ಕಲಸಿಟ್ಟಿರ ಬೇಕು.
ಮೊದಲು ಮಾಡಿಟ್ಟ ಹೂರಣದ ಉಂಡೆಗಳನ್ನು ಕಲಸಿಟ್ಟ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕು.
ಬಿಸಿ ಬಿಸಿ ಸುಕುನುಂಡೆ ಸವಿಯಲು ರೆಡಿ.
- -ಸಹನಾ ಭಟ್, ಸಹನಾಸ್ ಕಿಚನ್
ನವರಾತ್ರಿಗಾಗಿ ವಿಶೇಷ ಕಜ್ಜಾಯ – ಭಾಗ 1
ನವರಾತ್ರಿಗಾಗಿ ವಿಶೇಷ ಕಜ್ಜಾಯ – ಭಾಗ 3
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ