Latest

ಡೈಮಂಡ್ ಟ್ರೋಫಿ ಗೆದ್ದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾದ ನೀರಜ್ ಛೋಪ್ರಾ

ಪ್ರಗತಿವಾಹಿನಿ ಸುದ್ದಿ, ಜ್ಯೂರಿಚ್: ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಗು ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

24ರ ಹರೆಯದ ಅವರು ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.44 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಗೆದ್ದರು. ಡೈಮಂಡ್ ಟ್ರೋಫಿಯ ಹೊರತಾಗಿ, ನೀರಜ್ 30,000 ಡಾಲರ್ ಬಹುಮಾನ  ಗೆದ್ದರು.

ಚೋಪ್ರಾ ಫೌಲ್‌ನೊಂದಿಗೆ ಪ್ರಾರಂಭಿಸಿದರು. ಆದರೆ ಎರಡನೇ ಪ್ರಯತ್ನದಲ್ಲಿ 88.44 ಮೀ ಎಸೆಯುವ ಮೂಲಕ ಅಗ್ರ ಸ್ಥಾನಕ್ಕೆ ಜಿಗಿದ ಅವರ ನಾಲ್ಕನೇ ವೃತ್ತಿ ಜೀವನದ ಅತ್ಯುತ್ತಮ ಎಸೆತ ಇದೆನ್ನಿಸಿತಲ್ಲದೆ ಅವರ ಗೆಲುವಿನ ಪ್ರಯತ್ನವಾಗಿ ಹೊರಹೊಮ್ಮಿತು.

ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ   86.94 ಮೀ ಅತ್ಯುತ್ತಮ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್ ಅತ್ಯುತ್ತಮ 83.73 ಮೀಟರ್‌ಗಳೊಂದಿಗೆ ಮೂರನೇ ಸ್ಥಾನ ಪಡೆದರು.

ಭಾರತೀಯ ಸೂಪರ್‌ಸ್ಟಾರ್ ಎನಿಸಿರುವ ನೀರಜ್ ಛೋಪ್ರಾ ಈಗ ಒಲಿಂಪಿಕ್ ಚಾಂಪಿಯನ್, ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಮತ್ತು ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದಾರೆ. ಇವೆಲ್ಲವನ್ನೂ ಅವರು ಕೇವಲ 13 ತಿಂಗಳಲ್ಲಿ ಸಾಧಿಸಿದ್ದರು. ಕಳೆದ ವರ್ಷ ಆಗಸ್ಟ್ 7ರಂದು ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಪ್ರಿನ್ಸ್ ಚಾರ್ಲಿಸ್ ಇನ್ನು ಮುಂದೆ ಬ್ರಿಟನ್ ನ ರಾಜ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button