Karnataka News

*ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ ಎಫ್ ಐ ಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ತುಮಕೂರಿನಲ್ಲಿ ನಡೆದಿದ್ದ ರೈತರು, ಮಠಾಧೀಶರು, ಜನನಾಯಕರು ನಡೆಸಿದ್ದ ಪ್ರತಿಭಟನೆ ವಿಚಾರವಾಗಿ ಇದೀಗ ಇಬ್ಬರು ಸ್ವಾಮೀಜಿಗಳು ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿ ತೊಂದರೆಯುಂಟುಮಾಡಿದ್ದಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಸ್ವಾಮೀಜಿಗಳು ಸೇರಿದಂತೆ 11 ಜನರ ವಿರುದ್ಧ ಎಫ್ ಐಆರ್ ದಾಖಾಲಗಿದೆ. ಆದರೆ ಯಾವ ಸ್ವಾಮೀಜಿಗಳು ಎಂಬ ಬಗ್ಗೆ ಪೊಲೀಸರು ಎಫ್ ಐ ಆರ್ ನಲ್ಲಿ ಹೆಸರು ಉಲ್ಲೇಖ ಮಾಡಿಲ್ಲ.

Home add -Advt

ಹೇಮಾವತಿ ಲಿಂಕ್ ಕೆನಾಲ್ ಗೆ ವಿರೋಧಿಸಿ ನಿನ್ನೆ ತುಮಕೂರಿನ ಗುಬ್ಬಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆಗೆ ಮಠಾಧೀಶರು, ಸ್ವಾಮೀಜಿಗಳು ಸಾಥ ನೀಡಿದ್ದರು. ರಾಷ್ಟ್ರೀಯ ಹೆದ್ದಾರಿ ತಡೆದು, ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕರಿಗೆ ತೊಂದರೆ, ಸರ್ಕಾರಿ ವಾಹನಗಳಿಗೆ ಹಾನಿ, ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಮಾಡಿ ತೊಂದರೆ ಮಾಡಿದ ಆರೋಪದಲ್ಲಿ ಇದೀಗ ಪ್ರಕರಣ ದಾಖಲಾಗಿದೆ.


Related Articles

Back to top button