Belagavi NewsBelgaum NewsCrimeKannada NewsKarnataka NewsNational

*ರಸ್ತೆ ಬದಿ ಪತ್ತೆಯಾದ ನವಜಾತ ಗಂಡು ಶಿಶು: ಕುರಿಗಾಹಿಗಳಿಂದ ರಕ್ಷಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆ ಬದಿ ಬಿಸಾಡಿದ್ದ ನವಜಾತ ಗಂಡು ಶಿಶುವನ್ನು ಕುರಿಗಾಹಿಗಳು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರು ರಕ್ಷಿಸಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಹತ್ತಿರವಿರುವ ಕಿತ್ತೂರು ಬಸವನಕಟ್ಟಿ ಬ್ರಿಡ್ಜ್ ಬಳಿ ನವಜಾತ ಗಂಡು ಶಿಶು ಪತ್ತೆಯಾಗಿದೆ.‌

ಮಗು ಅಳುವ ಸದ್ದು ಕೇಳಿ ಅಲ್ಲಿ ಕುರಿ ಮೇಯಿಸುತ್ತಿದ್ದ ಕುರಿ ಕಾಯಿಗಳು ಬಟ್ಟೆಯಲ್ಲಿ ಸುತ್ತಿ ನೆಲದ ಮೇಲೆ ಬಿಟ್ಟಿದ್ದ ಮಗುವನ್ನು ಕಂಡ ಕೂಡಲೇ ರಕ್ಷಿಸಿದ್ದಾರೆ. ಯಾರೋ ದುರುಳರು ರಸ್ತೆಗೆ ನಿರ್ಮಿಸಿದ ಬ್ರಿಡ್ಜ್ ಬಳಿ ಬಿಸಾಡಿ ಪರಾರಿ ಯಾಗಿದ್ದಾರೆ.  ಈಗ ಸದ್ಯ ನವಜಾತ ಗಂಡು ಶಿಶುವನ್ನು ಸವದತ್ತಿ ತಾಲೂಕೂ ಆಸ್ಪತ್ರೆಗೆ ರವಾನಿಸಲಾಗಿದೆ. ಸುರೇಬಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button