Kannada NewsKarnataka News

ಬೆಳಗಾವಿಯಲ್ಲಿ ಮತ್ತೆ ದಿಢೀರ್ ಕೊರೋನಾ ಹೆಚ್ಚಳ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ದಿಢೀರ್ ಕೊರೋನಾ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ದಿನಕ್ಕೆ 10 -15 ಜನರಿಗೆ ಕಾಣಿಸಿಕೊಳ್ಳುತ್ತಿದ್ದ ಸೋಂಕು ಶನಿವಾರ ದಿಢೀರ್ 93ಕ್ಕೆ ಏರಿಕೆಯಾಗಿದೆ.

ಶನಿವಾರ ಬೆಳಗಾವಿಯಲ್ಲಿ 45, ಚಿಕ್ಕೋಡಿಯಲ್ಲಿ 17, ಅಥಣಿ ಮತ್ತು ಬೈಲಹೊಂಗಲದಲ್ಲಿ ತಲಾ 6, ಹುಕ್ಕೇರಿ ಮತ್ತು ರಾಯಬಾಗದಲ್ಲಿ ತಲಾ 4, ಖಾನಾಪುರದಲ್ಲಿ 3, ರಾಮದುರ್ಗದಲ್ಲಿ 2, ಗೋಕಾಕದಲ್ಲಿ 1 ಹಾಗೂ ಇತರೆ 5 ಜನರಿಗೆ ಸೋಂಕು ದೃಢಪಟ್ಟಿದೆ.

ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಕೇವಲ 15ಕ್ಕಿಂತ ಕಡಿಮೆ ಜನರಿಗೆ ಸೋಂಕು ಕಾಣಿಸುತ್ತಿತ್ತು. ಒಂದು ದಿನ ಒಂದೂ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ಇದೀಗ ಒಂದೇ ದಿನ 100ರ ಸಮೀಪ ಕಾಣಿಸಿದೆ.

ಆದರೆ ಶನಿವಾರ ಯಾವುದೇ ಸಾವು ಸಂಭವಿಸಿಲ್ಲ.

Home add -Advt

ಪರಿಸರ ನಷ್ಟವನ್ನು ತುಂಬಲು ಪ್ರತಿ ವರ್ಷ ಪರಿಸರ ಆಯವ್ಯಯ: ಮುಖ್ಯಮಂತ್ರಿಗಳ ಘೋಷಣೆ

ಸೆಪ್ಟೆಂಬರ್ 27ಕ್ಕೆ ಕರ್ನಾಟಕ ಬಂದ್

Related Articles

Back to top button