Kannada NewsKarnataka News

ಪೋಷಣ ಅಭಿಯಾನ, ಗರ್ಭಿಣಿಯರಿಗೆ ಸೀಮಂತ

ಪೋಷಣ ಅಭಿಯಾನ, ಗರ್ಭಿಣಿಯರಿಗೆ ಸೀಮಂತ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಗ್ರಾಮ ಪಂಚಾಯತಿ ಕಾಕತಿ ಇವರ ಸಹಯೋಗದಲ್ಲಿ ಪೋಷಣ ಅಭಿಯಾನ ಆಚರಣೆ ಅಂಗವಾಗಿ ಕಾಕತಿಯ ಸಿದ್ದೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪೋಷಣ ಅಭಿಯಾನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತಿ ಸದಸ್ಯ ಯಲ್ಲಪ್ಪ ಕೋಳೆಕರ   ಉದ್ಘಾಟಿಸಿ ಮಾತನಾಡುತ್ತಾ, ಪೂರಕ ಆಹಾರದಿಂದ ಮಗುವಿನ ಬೆಳವಣಿಗೆ ಉತ್ತಮ ಮಟ್ಟದ್ದಾಗುತ್ತದೆ. ಗರ್ಭಿಣಿಯರು ಪೂರಕ ಆಹಾರ ಸೇವಿಸುವುದರಿಂದ ಹೆರಿಗೆ ಸಮಯದಲ್ಲಿ ಉಂಟಾಗುವ ಅನೇಕ ತೊಂದರೆಗಳಿಂದ ಪಾರಾಗಬಹುದು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಮಾಜದ ಕೊನೆಯ ವ್ಯಕ್ತಿಗಳಿಗೂ ಮುಟ್ಟಿಸಬೇಕೆಂದು ತಿಳಿಸಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯ ಸಿದ್ದನಗೌಡ ಸುಣಗಾರ   ಮಾತನಾಡಿ ವೈಯಕ್ತಿಕ ಸ್ವಚ್ಚತೆಗೆ ಗಮನ ನೀಡುವುದು ಅವಶ್ಯಕವಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ರೋಟಾ ವೈರಸ್ ಲಸಿಕೆಯನ್ನು ನೀಡಲಾಗುತ್ತಿದ್ದು ಸಾರ್ವಜನಿಕರು ಅದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಪ್ರಾತ್ಯಕ್ಷಿಕೆಯ ಮೂಲಕ ಕೈತೊಳೆಯುವ ಕಾರ್ಯಕ್ರಮ ಹಾಗೂ ಪೌಷ್ಠಿಕ ಆಹಾರದ ಶಿಬಿರನ್ನು ಆಯೋಜಿಸಲಾಗಿತ್ತು.
ಪೋಷಣ ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಬಸವರಾಜ ಯಲಿಗಾರ  ಮಾತನಾಡಿದರು.

Home add -Advt

ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ  ಅಶೋಕ ಕುಂಬಾರ,  ಬಸವರಾಜ ಗಾಣಗೇರ, ಶಕುಂತಲಾ ಮಾನಗಾಂವಿ ಗ್ರಾಮ ಲೆಕ್ಕಾಧಿಕಾರಿ  ಪ್ರಕಾಶ ಗಮಾನೆ, ಡಾ.ಸಂಗಿತಾ, ಡಾ.ಗೌತಮ,  ಬಾಹುಬಲಿ ಮೆಳವಂಕಿ, ಆರೋಗ್ಯ ಸಹಾಯಕರಾದ ಲಕ್ಷ್ಮಿ ತೇಲಿ, ಗುರು ಮೇದಾರ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮವನ್ನು ಸಿ.ಜಿ ಅಗ್ನಿಹೋತ್ರಿ  ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ರೇಖಾ ಉಪ್ಪಾರ ನಿರೂಪಿಸಿ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button