*ಜೆನ್ಸನ್ ಹುವಾಂಗ್ ಸುತ್ತ ಗೂಢಚರ್ಯೆ ವಿವಾದ*: *ಎನ್ವಿಡಿಯಾ ಷೇರುಗಳಿಗೂ ಹೊಡೆತ, ಸಂಪತ್ತಿನಲ್ಲೂ ಕುಸಿತ*

ಪ್ರಗತಿವಾಹಿನಿ ಸುದ್ದಿ: ವಿಶ್ವದ ಪ್ರಮುಖ ಎಐ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ಚೀನಾದ ಮಹಿಳೆಯೊಬ್ಬರೊಂದಿಗಿನ ಸಂಬಂಧ ಹಾಗೂ ಆಕೆಯ ಗೂಢಚಾರಿ ಸಂಪರ್ಕದ ಕುರಿತ ಶಂಕೆಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬೆಳವಣಿಗೆ ತಂತ್ರಜ್ಞಾನ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಎನ್ವಿಡಿಯಾದ ಷೇರುಗಳ ಬೆಲೆಯೂ ಕುಸಿತ ಕಂಡಿದೆ. ಜಾಗತಿಕ ಎಐ ಷೇರುಗಳಲ್ಲಿನ ಕುಸಿತವೂ ಕಂಪನಿಯ ಷೇರುಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ಅಂಕಿಅಂಶಗಳ ಪ್ರಕಾರ, ಜೆನ್ಸನ್ ಹುವಾಂಗ್ ಅವರ ಆಸ್ತಿ ಮೌಲ್ಯ 6.47 ಬಿಲಿಯನ್ ಡಾಲರ್ನಷ್ಟು ಇಳಿಕೆಯಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ 148 ಬಿಲಿಯನ್ ಡಾಲರ್ಗೆ ತಲುಪಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿಯೂ ಅವರ ಸ್ಥಾನ ಎಂಟರಿಂದ ಹತ್ತಕ್ಕೆ ಇಳಿದಿದೆ. ಅಲ್ಲಿ ಅವರ ಆಸ್ತಿ ಮೌಲ್ಯ 154 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಎನ್ವಿಡಿಯಾ ಸಿಇಒ ಆಗಿರುವ ಜೆನ್ಸೆನ್ ಹುವಾಂಗ್ ತಾನು ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎನ್ವಿಡಿಯಾದ ಗ್ರಾಹಕ ಸಂಸ್ಥೆಗಳಲ್ಲಿ ಒಂದಾದ ಮೆಗಾಸ್ಪೀಡ್ನ ಮಾಲಕಿಯಾದ ಅಲೈಸ್ ಹುವಾಂಗ್ ಅವರೊಂದಿಗೆ ಜೆನ್ಸೆನ್ ಸಂಬಂಧ ಇಟ್ಟುಕೊಂಡಿದ್ದು, ಈಕೆ ಚೀನಾದ ಏಜೆಂಟ್ ಎಂಬುದು ಅಮೆರಿಕದ ಎಫ್ಬಿಐಗೆ ಇರುವ ಶಂಕೆಯಾಗಿದೆ.
ಇನ್ನು, ಎನ್ವಿಡಿಯಾದ ಗ್ರಾಹಕ ಸಂಸ್ಥೆಗಳಲ್ಲಿ ಒಂದಾದ ಮೆಗಾಸ್ಪೀಡ್ನ ಮಾಲಕಿ ಅಲೈಸ್ ಹುವಾಂಗ್ ಅವರೊಂದಿಗೆ ಜೆನ್ಸನ್ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಆ ಮಹಿಳೆಗೆ ಚೀನಾದ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕವಿರಬಹುದು ಎಂಬ ಶಂಕೆ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐಗೆ ಇದೆ.



