ಇನ್ಮುಂದೆ ಆಫ್ ಲೈನ್ ನಲ್ಲಿ ಆನ್‌ಲೈನ್ ಪೇಮೆಂಟ್‌ !

ಪ್ರಗತಿವಾಹಿನಿ ಸುದ್ದಿ, ನವದೆಹಲಿ –  ಹಣದ ರೂಪ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇದೆ. ಬಹು ಹಿಂದೆ ಕಲ್ಲಿನ ನಾಣ್ಯಗಳು, ಚರ್ಮದ ನಾಣ್ಯಗಳು ಸಹ ಬಳಕೆಯಲ್ಲಿದ್ದವು ಎಂಬುದಕ್ಕೆ ಐತಿಹಾಸಿಕ ಪುರಾವೆಗಳಿವೆ.

ಕಳೆದ ಎರಡು ಶತಮಾನಗಳ ಹಿಂದಿನವರೆಗೂ ಚಿನ್ನ, ಬೆಳ್ಳಿಯ ನಾಣ್ಯಗಳಿದ್ದು ೧೦೦ ವರ್ಷದ ಹಿಂದೆ ತಾಮೃದ ನಾಣ್ಯಗಳಿದ್ದವು. ಬಳಿಕ ನಾಣ್ಯದ ಜೊತೆಗೆ ನೋಟುಗಳು ಚಲಾವಣೆಗೆ ಬಂದವು.

ಇತ್ತೀಚಿನ ದಿನಗಳಲ್ಲಿ ನಗದು ಹಣ ಚಲಾವಣೆಯನ್ನೂ ಸಾಧ್ಯವಾದಷ್ಟು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ. ಆನ್ ಲೈನ್ ಮೂಲಕವೇ ವ್ಯಾಪಾರ ವಹಿವಾಟು ನಡೆದರೆ ತೆರಿಗೆ ಕಳ್ಳರನ್ನು ಹಿಡಿಯುವುದು ಸುಲಭವಾಗುತ್ತದೆ ಎಂಬುದು ಒಂದೆಡೆಯಾದರೆ ನೋಟುಗಳ ಮುದ್ರಣಕ್ಕೆ ತಗುಲುವ ವೆಚ್ಚವೂ ಕಡಿಮೆಯಾಗುತ್ತದೆ ಎಂಬುದು ಇದರ ಉದ್ದೇಶ.

ಈ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಹಣ ಪಾವತಿಗೆ ಪೇ ಟಿಎಂ, ಗೂಗಲ್ ಪೇ ಸೇರಿದಂತೆ ಹತ್ತು ಹಲವು ಸಂಸ್ಥೆಗಳು ಸಹ ಸೇವೆ ನೀಡುತ್ತಿವೆ. ಆದರೆ ಈವರೆಗೆ ಯಾವುದೇ ಆನ್ ಲೈನ್ ಹಣ ವರ್ಗಾವಣೆಗೆ ನೆಟ್‌ವರ್ಕ್‌ನ ಅಗತ್ಯವಿರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ನೆಟ್ ವರ್ಕ್‌ರಹಿತವಾಗಿಯೂ ಹಣ ವರ್ಗಾವಣೆ ಮಾಡುವ ತಂತ್ರಜ್ಞಾನ ಅಳವಡಿಕೆಗೆ ಸಿದ್ಧತೆಗಳು ನಡೆದಿವೆ.

ವಾರದ ಹಿಂದೆ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಈ ರೀತಿಯ ಆಫ್ ಲೈನ್ ಹಣ ವರ್ಗಾವಣೆಯ ರೂಪುರೇಶೆಗಳನ್ನು ಸಿದ್ಧಪಡಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾಗೆ (ಎನ್‌ಪಿಸಿಐ) ಸೂಚಿಸಿತ್ತು. ಅದರಂತೆ ಎನ್‌ಪಿಸಿಐ ಆಪ್ ಲೈನ್ ಪೇಮೆಂಟ್‌ನ ತಂತ್ರಜ್ಞಾನದ ಪರಿಶೀಲನೆ ಕೈಗೊಂಡಿದೆ.

ಸಧ್ಯಕ್ಕೆ ಈ ಸೌಲಭ್ಯ ಗ್ರಾಮೀಣ ಭಾಗದ ಜನರ ಅನುಕೂಲದ ಸಲುವಾಗಿ ಗರಿಷ್ಠ ೨೦೦ ರೂ.ವರೆಗಿನ ಹಣ ವರ್ಗಾವಣೆಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಯುಪಿಐ ಲೈಟ್ ಎಂಬ ಈ ತಂತ್ರಜ್ಞಾನದಲ್ಲಿ ಒಮ್ಮೆ ೨೦೦ ರೂ. ನಂತೆ ಒಟ್ಟು ೨೦೦೦ ರೂ.ವರೆಗೆ ಮಾತ್ರ ಹಣ ವರ್ಗಾವಣೆಗೆ ಆರಂಭದಲ್ಲಿ ಅವಕಾಶವಿರುತ್ತದೆ.

ಮುಖಾಮುಖಿಯಾಗಿ ಹಣ ವರ್ಗಾವಣೆಯ ಸಂದರ್ಭದಲ್ಲಿ ಈ ತಂತ್ರಜ್ಞಾನ ಬಳಸಬಹುದಾಗಿದೆ. ಕಾರ್ಡ್‌ಗಳು, ಮೊಬೈಲ್ ಆಪ್, ಡಿಜಿಟಲ್ ವ್ಯಾಲೆಟ್ ಮೊದಲಾಗಿ ಯಾವುದೇ ಚಾನೆಲ್ಗಳ ಮೂಲಕವೂ ಆಪ್ ಲೈನ್ ಪೇಮೆಂಟ್ ಮಾಡಬಹುದಾಗಿದೆ.

ಹಣ ವರ್ಗಾವಣೆ ಆಪ್ ಲೈನ್ ಆಗುವುದರಿಂದ ಹಣ ವರ್ಗಾವಣೆ ಆದ ಬಗ್ಗೆ ಖಚಿತಪಡಿಸಿಕೊಳ್ಳಲು ಒಟಿಪಿ ಬದಲು ಎಸ್‌ಎಂಎಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಒಂದೇ ಪ್ರಯಾಣಿಕನಿಗಾಗಿ 9 ತಾಸು ಪ್ರಯಾಣಿಸಿದ ವಿಮಾನ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button